ವೈರಲ್ ನ್ಯೂಸ್

ನಡೆಯಲಾಗದೆ ಒದ್ದಾಡುತ್ತಿದ್ದ ಆನೆಗೆ ಚಪ್ಪಲಿ ಹೊಲಿದ ಬಂಗಾರದ ಮನುಷ್ಯ..! ಯುವ ವೈದ್ಯನ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ

ನ್ಯೂಸ್ ನಾಟೌಟ್: ಆನೆಯೊಂದು ಕಾಲಿನ ಗಾಯಕ್ಕೆ ಸಿಲುಕಿ ಒದ್ದಾಡುತ್ತಿದ್ದು. ನೋವಿನಿಂದ ನರಳುತ್ತಿದ್ದ ಕುಮಾರಿ ಹೆಸರಿನ ಆನೆಗೆ ಯುವ ವೈದ್ಯರೊಬ್ಬರು ಚಿಕಿತ್ಸೆ ನೀಡಿ ನಡೆಯುವಂತೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

60 ವರ್ಷದ ಕುಮಾರಿ ಹೆಸರಿನ ಆನೆ ಕಳೆದ ಕೆಲವು ವರ್ಷಗಳಿಂದ ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡಿತ್ತು. ಅದನ್ನು ಮೈಸೂರಿನ ಹುಣಸೂರು ತಾಲೂಕಿನ ಹರವೆ ಆನೆ ಕ್ಯಾಂಪ್ ಗೆ ತರಲಾಗಿತ್ತು. ಕೆಲವು ದಿನಗಳ ಹಿಂದೆ ಆನೆಯ ಕಾಲಿಗೆ ಗಾಯವಾಗಿತ್ತು.

ಎಷ್ಟೇ ಮದ್ದು ಹಾಕಿದ್ದರೂ ಅದು ಕಾಲಿನಲ್ಲಿ ನಿಲ್ಲುತ್ತಿರಲಿಲ್ಲ. ನೆಲದ ಮೇಲೆ ಕಾಲು ಇಟ್ಟಾಗ ಔಷಧಿ ವ್ಯರ್ಥವಾಗುತ್ತಿತ್ತು. ಇದನ್ನು ಅರಿತ ೨೯ ವರ್ಷದ ಯುವ ವೈದ್ಯ ಡಾ.ರಮೇಶ್ ಹೊಸ ಉಪಾಯ ಹೂಡುತ್ತಾರೆ. ಚಪ್ಪಲಿಯನ್ನು ಹೊಲಿಯುವುದಕ್ಕೆ ನಿರ್ಧರಿಸುತ್ತಾರೆ. ಈ ಉಪಾಯ ಫಲ ನೀಡಿದೆ. ಇದೀಗ ಆನೆ ಚೇತರಿಸಿಕೊಳ್ಳುತ್ತಿದೆ. ಈ ಕಾರ್ಯಕ್ಕೆ ಎಲ್ಲ ಕಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಡಾ ರಮೇಶ್ ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಛತ್ರದ ಹೊಸಹಳ್ಳಿ ಗ್ರಾಮದವರು. ಕಳೆದ 5 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಪಶುವೈದ್ಯರಾಗಿದ್ದಾರೆ. ಡಾ. ರಮೇಶ್‌ ಅವರು ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳನ್ನು ಸುರಕ್ಷಿತವಾಗಿ ವಾಪಸ್ಸು ಕಾಡಿಗೆ ಕಳುಹಿಸುವುದರಲ್ಲಿ ಪರಿಣಿತರು. ಇದುವರೆಗೆ ಅವರು ಆರು ಹುಲಿ ಕಾರ್ಯಾಚರಣೆ 35 ಆನೆ ಕಾರ್ಯಾಚರಣೆ ಹಾಗೂ 50ಕ್ಕೂ ಹೆಚ್ಚು ಚಿರತೆಗಳನ್ನು ನಾಡಿನಿಂದ ಕಾಡಿಗೆ ವಾಪಸ್ಸು ಕಳುಹಿಸಿದ್ದಾರೆ.

ಬಾಲ್ಯದಿಂದಲೇ ತಾನೊಬ್ಬ ಪಶು ವೈದ್ಯನಾಗಬೇಕು ಎಂದು ಕನಸು ಕಾಣುತ್ತಿದ್ದ ಅವರು ಬಳಿಕ ಹಾಸನದ ಪಶುವೈದ್ಯಕೀಯ ಕಾಲೇಜು ಸೇರಿ ಪದವಿ ಪಡೆದರು. ಬಳಿಕ ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಣಿಗಳ ಶಸ್ತ್ರಚಿಕಿತ್ಸೆ ಹಾಗೂ ರೇಡಿಯಾಲಜಿಯ ಕೋರ್ಸ್ ಮಾಡಿದರು. 2018ರಲ್ಲಿ ಅವರು ತಮ್ಮ ಕನಸನ್ನು ಪೂರೈಸಿಕೊಂಡು ಪ್ರಾಣಿಗಳ ಡಾಕ್ಟರ್‌ ಆದರು.

Related posts

ನಿಂತಿದ್ದ ಕಂಟೈನರ್‌ ಗೆ KSRTC ಬಸ್ ಡಿಕ್ಕಿ..! 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..! ಇಲ್ಲಿದೆ ಸಿಸಿಟಿವಿ ದೃಶ್ಯ

ಉಪ್ಪಿನಂಗಡಿ: ಮಗನ ಹುಟ್ಟುಹಬ್ಬಕ್ಕೆಂದು ಕಡವೆಯನ್ನು ಬೇಟೆಯಾಡಿದ ವ್ಯಕ್ತಿ..! ಕೋವಿ ಮತ್ತು ಮಾಂಸ ಅಣ್ಯಾಧಿಕಾರಿಗಳ ವಶಕ್ಕೆ..!

ಠಾಣೆ ಎದುರೇ ಎಸ್‌ ಐ ಪತ್ನಿ ಪತಿಯ ವಿರುದ್ಧ ಧರಣಿ..! ಅಹೋರಾತ್ರಿ ಧರಣಿಯ ಹಿಂದಿದೆ ವಿಚಿತ್ರ ಸ್ಟೋರಿ..!