ಕ್ರೈಂವೈರಲ್ ನ್ಯೂಸ್

ಕರೆಂಟ್‌ ಕಂಬವನ್ನೇರಿ ಲೈನ್‌ ಮ್ಯಾನ್‌ ಗೆ ಧಮ್ಕಿ ಹಾಕಿದ ಮಹಿಳೆ..! ವಿದ್ಯುತ್ ಬಿಲ್ ಪಾವತಿಸದ ಮಹಿಳೆಯ ಭಂಡ ಧೈರ್ಯ..! ಇಲ್ಲಿದೆ ವೈರಲ್ ವಿಡಿಯೋ

229

ನ್ಯೂಸ್ ನಾಟೌಟ್: ಮಹಿಳೆಯೊಬ್ಬರು ಕರೆಂಟ್‌ ಕಂಬವನ್ನೇರಿ ಲೈನ್‌ ಮ್ಯಾನ್‌ ಗೆ ಧಮ್ಕಿ ಹಾಕಿದ್ದಾರೆ. ಹೌದು ಕರೆಂಟ್‌ ಬಿಲ್‌ ಸರಿಯಾಗಿ ಪಾವತಿಸದ ಕಾರಣ ವಿದ್ಯುತ್‌ ಕಂಬವನ್ನೇರಿ ಲೈನ್‌ ಮ್ಯಾನ್‌ ವಿದ್ಯುತ್‌ ಕಡಿತಗೊಳಿಸಲು ಮುಂದಾದ ಸಂದರ್ಭದಲ್ಲಿ ಆತನ ಹಿಂದೆಯೇ ದೊಣ್ಣೆ ಹಿಡಿದು ಕಂಬವನ್ನೇರಿದ ಮಹಿಳೆಯೊಬ್ಬರು ಅವಾಸ್‌ ಹಾಕಿ ಆತನನ್ನು ಕಂಬದಿಂದ ಕೆಳಗಿಳಿಸಿದ್ದಾರೆ. ಮಹಿಳೆಯ ಭಂಡ ಧೈರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ ಈ ಅಚ್ಚರಿಯ ಪ್ರಕರಣ ನಡೆದಿದ್ದು, ಹಲವು ತಿಂಗಳುಗಳಿಂದ ವಿದ್ಯುತ್‌ ಬಿಲ್‌ ಪಾವತಿಸುತ್ತಿಲ್ಲ ಎಂಬ ಕಾರಣಕ್ಕೆ ಲೈನ್‌ ಮ್ಯಾನ್‌ ಬಂದು ನೇರವಾಗಿ ಕರೆಂಟ್‌ ಕಂಬದಿಂದಲೇ ವಿದ್ಯುತ್‌ ಕಡಿತಗೊಳಿಸಲು ಮುಂದಾಗಿದ್ದಾನೆ. ಇದನ್ನು ಕಂಡ ಮಹಿಳೆಯೊಬ್ಬರು ತಾನು ಕೂಡಾ ಕೈಯಲ್ಲೊಂದು ದೊಣ್ಣೆ ಹಿಡಿದು ಏಣಿಯ ಮೂಲಕ ಕಂಬವನ್ನೇರಿ ಕರೆಂಟ್‌ ತೆಗೆದ್ರೆ ಜಾಗ್ರತೆ ಎಂದು ಆತನಿಗೆ ಬೈದಿದ್ದಾರೆ. ಈ ಮಹಿಳೆಯ ಬೈಗುಳಕ್ಕೆ ಹೆದರಿದ ಲೈನ್‌ ಮ್ಯಾನ್‌ ಕರೆಂಟ್‌ ಕಟ್‌ ಮಾಡದೆಯೇ ಕಂಬದಿಂದ ಇಳಿದು ಹೋಗಿದ್ದಾನೆ. ಡಿಸೆಂಬರ್‌ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇತ್ತೀಚೆಗೆ ವೈರಲ್ ಆಗುತ್ತಿದೆ.

Click

https://newsnotout.com/2025/01/american-retaired-army-man-become-harm-to-society-s/
https://newsnotout.com/2025/01/police-control-room-kannada-news-student-issue-viral-news/
https://newsnotout.com/2025/01/kannada-news-ksrtc-bus-issue-break-fail-s-matter-d/
https://newsnotout.com/2025/01/yamaha-bike-showroom-kannada-news-more-than-50-bikes-hd/
https://newsnotout.com/2025/01/metro-case-video-issue-man-arrested-kannada-news-d/
See also  ಒಂದೇ ಕುಟುಂಬದ 85 ಮಂದಿಯಿಂದ ಏಕಕಾಲಕ್ಕೆ ಮತದಾನ..! ಮತದಾನಕ್ಕಾಗಿ ಎಲ್ಲರೂ ಒಂದೆಡೆ ಸೇರುವ ಸಂಪ್ರದಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget