ಕರಾವಳಿಕ್ರೈಂಚಿಕ್ಕಮಗಳೂರುವೈರಲ್ ನ್ಯೂಸ್

ನೇರಳೆ ಹಣ್ಣು ಕೊಯ್ಯಲು ಮರ ಹತ್ತಿದ 13ರ ಬಾಲಕನಿಗೆ ವಿದ್ಯುತ್ ಶಾಕ್..! 7ನೇ ತರಗತಿ ವಿದ್ಯಾರ್ಥಿ ಶಾಲೆ ಆವರಣದಲ್ಲೇ ಮೃತ್ಯು..!

ನ್ಯೂಸ್ ನಾಟೌಟ್: ಮರಕ್ಕೆ ಹತ್ತಿ ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್ ಹೊಡೆದು ೭ನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಇಂದು(ಜೂ.15) ನಡೆದಿದೆ.

ಆಕಾಶ್ (13) ಮೃತ ಬಾಲಕ ಎಂದು ಗುರುತಿಸಲಾಗಿದೆ. ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದಲ್ಲಿರುವ ನೇರಳೆ ಮರಕ್ಕೆ ಹಣ್ಣು ಕೀಳಲು ಮೂವರು ವಿದ್ಯಾರ್ಥಿಗಳು ಹತ್ತಿದ್ದಾರೆ. ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಮರ ಜಾರುತ್ತಿತ್ತು ಹಾಗೆ ಮರವೇರಿದ್ದ ಆಕಾಶ್ ಗೆ ಕಾಲು ಜಾರಿದೆ ಈ ವೇಳೆ ಆಧಾರಕ್ಕೆಂದು ಅಲ್ಲೇ ಹಾದು ಹೋದ ವಿದ್ಯುತ್ ತಂತಿ ಹಿಡಿದಿದ್ದಾನೆ. ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾಗಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಇದನ್ನು ಕಂಡ ಇತರ ವಿದ್ಯಾರ್ಥಿಗಳು ಅಧ್ಯಾಪಕರ ಗಮನಕ್ಕೆ ತಂದಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Click 👇

https://newsnotout.com/2024/06/film-chember-issue-banning-darshan-and-visiting
https://newsnotout.com/2024/06/darshan-and-gang-issue-today-future-decisions-have-been-decided
https://newsnotout.com/2024/06/darshan-mb-patil-kannada-news-agriculture-department

Related posts

ಎಂ.ಬಿ.ಫೌಂಡೇಶನ್ ಸುಳ್ಯ | ಲಯನ್ಸ್ ಕ್ಲಬ್ ಸುಳ್ಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ:ವಿಶೇಷ ಚೇತನ ಶಾಲಾ ಶಿಕ್ಷಕರಿಗೆ ಸನ್ಮಾನ,ಸಾಂದೀಪ್ ವಿಶೇಷ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ

ರೀಲ್ಸ್ ಮಾಡುವಾಗ 300 ಅಡಿ ಕಣಿವೆಗೆ ಕಾಲು ಜಾರಿ ಬಿದ್ದ ಸೋಷಿಯಲ್ ಮೀಡಿಯಾ ಸ್ಟಾರ್..! 6 ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಮೃತದೇಹ ಪತ್ತೆ..!

ಎನ್ ಎಂ ಸಿ ನೇಚರ್ ಕ್ಲಬ್ : ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಂದ ಕೃಷಿ ಕ್ಷೇತ್ರ ಅಧ್ಯಯನ, ಕೃಷಿ ಸಾಧಕರ ಭೇಟಿ, ಪರಿಚಯ ಮತ್ತು ಸಂದರ್ಶನ