ಆಟೋ ಮೊಬೈಲ್ಕರಾವಳಿದೇಶ-ವಿದೇಶವೈರಲ್ ನ್ಯೂಸ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 10,000 ರೂ.ವರೆಗೆ ಸಬ್ಸಿಡಿ..! ಕೇಂದ್ರ ಸಚಿವ ಹೆಚ್‌.​ಡಿ.ಕುಮಾರಸ್ವಾಮಿ ಘೋಷಣೆ

ನ್ಯೂಸ್ ನಾಟೌಟ್: ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿರುವ ಭಾಗವಾಗಿ ಹೊಸದಾಗಿ ಪರಿಚಯಿಸಲಾದ ಪಿಎಂ ಇ-ಡ್ರೈವ್ ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿದಾರರು 10,000 ರೂ.ವರೆಗೆ ಸಬ್ಸಿಡಿ ಪಡೆಯಬಹುದು ಎಂದಿದ್ದಾರೆ. ಎರಡನೇ ವರ್ಷದಲ್ಲಿ ಈ ಮೊತ್ತವನ್ನು 5,000 ರೂ.ಗೆ ಸೀಮಿತಗೊಳಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶೀಘ್ರದಲ್ಲೇ ಈ ಯೋಜನೆ ಆರಂಭವಾಗಲಿದೆ. ಕೇಂದ್ರ ಸಚಿವ ಸಂಪುಟ FAME ಬದಲಿಗೆ 14,335 ಕೋಟಿ ರೂ.ಗಳೊಂದಿಗೆ ಎರಡು ಯೋಜನೆಗಳನ್ನು ಅನುಮೋದಿಸಿದೆ. ಈ ಪೈಕಿ ಇನ್ನೋವೇಟಿವ್‌ ವೆಹಿಕಲ್‌ ಎನ್‌ಹಾನ್ಸ್‌ಮೆಂಟ್‌ ​(ಪಿಎಂ ಇ-ಡ್ರೈವ್) ಯೋಜನೆಯಲ್ಲಿ ಪಿಎಂ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿಗೆ 10,900 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಇದು ಎರಡು ವರ್ಷಗಳವರೆಗೆ ಮಾನ್ಯವಾಗಿರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಪಿಎಂ ಇ-ಡ್ರೈವ್ ಯೋಜನೆಯಡಿ ಮೊದಲ ವರ್ಷ ಒಂದು ಕಿಲೋ ವ್ಯಾಟ್ ಬ್ಯಾಟರಿಗೆ 5 ಸಾವಿರ ರೂ ಪಾವತಿಸಲು ನಿರ್ಧರಿಸಲಾಗಿದೆ. ಗರಿಷ್ಠ 10 ಸಾವಿರ ರೂ ಮಾತ್ರ ನೀಡುವುದಾಗಿ ತಿಳಿಸಲಾಗಿದೆ. ಎರಡನೇ ವರ್ಷದಲ್ಲಿ ಪ್ರತಿ ಕಿಲೋ ವ್ಯಾಟ್‌ಗೆ 2,500 ರೂ., ಗರಿಷ್ಠ 5,000 ರೂ ನೀಡಲಾಗುವುದು. ಅದೇ ರೀತಿ ಇ-ರಿಕ್ಷಾಗಳಿಗೆ 25 ಸಾವಿರ ರೂ ಹಾಗೂ ಎರಡನೇ ವರ್ಷಕ್ಕೆ 12,500 ರೂ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಆಧರಿತ ಇ-ವೋಚರ್ ಅನ್ನು ಪಿಎಂ ಇ-ಡ್ರೈವ್ ಪೋರ್ಟಲ್‌ನಲ್ಲಿ ರಚಿಸಲಾಗಿದೆ. ಇದಕ್ಕೆ ಖರೀದಿದಾರ ಮತ್ತು ಡೀಲರ್ ಇಬ್ಬರೂ ಸಹಿ ಮಾಡಬೇಕು ಮತ್ತು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಲಾಗಿದೆ.

Click

https://newsnotout.com/2024/09/bjp-mla-munirathna-case-kannada-news-viral-police-investigation/
https://newsnotout.com/2024/09/tirupati-tirumala-temple-food-in-animal-oil-kannada-news-allegation/
https://newsnotout.com/2024/09/uppendra-cinema-seen-leak-kannada-news-sandalwood-viral-issue/

Related posts

3 ವರ್ಷದ ಮಗು ನೀರಿನ ತೊಟ್ಟಿಗೆ ಬಿದ್ದು ದುರಂತ ಅಂತ್ಯ..! ಮನೆಯವರೆಲ್ಲ ನಮಾಜ್‌ ಮಾಡುತ್ತಿದ್ದ ವೇಳೆ ದುರ್ಘಟನೆ..!

ತೆರೆದ ಬೃಹತ್ ಬಾವಿಯ ದಂಡೆಯ ಮೇಲೆ ಮಗುವಿನ ಜೊತೆ ಕುಳಿತು ಅಪಾಯಕಾರಿ ರೀಲ್ಸ್..!‌ ಮಹಿಳೆಯ ಕಾಲಿನಲ್ಲಿ ನೇತಾಡಿದ ಮಗು.!

ಹೆಚ್‌.ಡಿ.ಕೆ ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ರು ಎಂದ ಸಚಿವ..! ಇಲ್ಲಿದೆ ಸಂಪೂರ್ಣ ಮಾಹಿತಿ