ಆಟೋ ಮೊಬೈಲ್ಜೀವನಶೈಲಿ

ಈ ಸ್ಕೂಟರ್‌ ಗೆ ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ! ಅತೀ ಕಡಿಮೆ ಬೆಲೆಗೆ ದೊರೆಯಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್!

239

ನ್ಯೂಸ್ ನಾಟೌಟ್: ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲೂ ಈ ವಿಭಾಗದಲ್ಲಿ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿವೆ. ಸದ್ಯ, ಬೆಂಗಳೂರಿನ ‘ಯುಲು’ ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಇ-ಸ್ಕೂಟರ್‌ವೊಂದನ್ನು ಲಾಂಚ್ ಮಾಡಿದೆ.

ಯುಲು ಕಂಪನಿ, ವೈನ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.55,555 ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಗೊಳಿಸಿದ್ದು, ರೂ.999 ಮುಂಗಡ ಹಣ ಪಾವತಿಸಿ, ಬುಕಿಂಗ್ ಮಾಡಬಹುದು. ಲಾಂಚ್ ಆಫರ್ ಕೆಲವೇ ದಿನಗಳವರೆಗೆ ಇರಲಿದೆ. ಆ ನಂತರ, ಇದರ ಬೆಲೆ ರೂ.64,999 ಆಗಲಿದ್ದು, ಮೇ ಮಧ್ಯ ಭಾಗದಲ್ಲಿ ವಿತರಣೆ ಆರಂಭವಾಗಲಿದೆ. ಸದ್ಯ, ಯುಲು ವೈನ್ ಇ-ಸ್ಕೂಟರ್ ಬೆಂಗಳೂರಿನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ವೈಯಕ್ತಿಯ ಬಳಕೆಗಾಗಿ ಯುಲು ವೈನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ‘ಬಜಾಜ್‌’ ಕಂಪನಿ ಮಾಲೀಕತ್ವದ ಚೇತಕ್ ಟೆಕ್ನಾಲಜೀಸ್ ಲಿಮಿಟೆಡ್ (CTL) ಅಭಿವೃದ್ಧಿಪಡಿಸಿದೆ. ಈ ಸ್ಕೂಟರ್ ಓಡಿಸಲು ಯಾವುದೇ ರೀತಿಯ ಡ್ರೈವಿಂಗ್ ಲೈಸೆನ್ಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ವರದಿ ತಿಳಿಸಿದೆ.

See also  ಚಳಿಗಾಲದಲ್ಲೂ ಚರ್ಮ ಕಾಂತಿಯುತವಾಗಿರಲು ಇವುಗಳನ್ನು ಕುಡಿಯಿರಿ...
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget