ಆಟೋ ಮೊಬೈಲ್ಕ್ರೈಂರಾಜ್ಯವೈರಲ್ ನ್ಯೂಸ್

ಎಲೆಕ್ಟ್ರಿಕ್ ಬೈಕ್ ರಿಪೇರಿಯಿಂದ ಬೇಸತ್ತು ಶೋ ರೂಮ್ ​ಗೆ ಬೆಂಕಿ ಹಚ್ಚಿದ ಗ್ರಾಹಕ..! 20 ದಿನದ ಹಿಂದೆಯಷ್ಟೇ ಸ್ಕೂಟರ್ ಖರೀದಿಸಿದ್ದ ಆರೋಪಿ..!

ನ್ಯೂಸ್‌ ನಾಟೌಟ್‌: ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋ ರೂಮ್​ ಗೆ ಬೆಂಕಿ ಇಟ್ಟ ಘಟನೆ ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿ ನಡೆದಿದೆ.
ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಗ್ರಾಹಕನೋರ್ವ ಬೆಂಕಿ ಹಚ್ಚಿದ್ದಾನೆ. ನಿನ್ನೆ (ಸೆ.1೦) ಬೆಳಿಗ್ಗೆ ಶೋ ರೂಂಗೆ ಬೆಂಕಿ ತಗುಲಿತ್ತು. ಆರಂಭದಲ್ಲಿ ಎಲ್ಲರೂ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ ಎಂದುಕೊಂಡಿದ್ದರು. ಆದರೆ ಪೊಲೀಸರ ತನಿಖೆ ವೇಳೆ ಬೆಂಕಿ ಹಚ್ಚಿದ್ದು ಪತ್ತೆಯಾಗಿದೆ.

ಮಹಮ್ಮದ್ ನದೀಮ್ ಎಂಬ ವ್ಯಕ್ತಿ ತನ್ನ ಏಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಸಿಬ್ಬಂದಿ ಜೊತೆ ವಾಗ್ವಾದ ಮಾಡಿ ಬಳಿಕ ಪೆಟ್ರೋಲ್ ತಂದು ಶೋ ರೂಂ ಒಳಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಘಟನೆಯಲ್ಲಿ 6 ಹೊಸ ಎಲೆಕ್ಟ್ರಿಕ್ ಬೈಕ್​ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಕೇವಲ 20 ದಿನದ ಹಿಂದೆ ಓಲಾ ಕಂಪನಿಯ ಸ್ಕೂಟರ್ ಖರೀದಿಸಿದ್ದ ಆರೋಪಿಯ ಬೈಕ್ ಪದೇ ಪದೇ ರಿಪೇರಿಗೆ ಬರುತ್ತಿದೆ ಎಂದು ಸಿಟ್ಟಾಗಿದ್ದ. ಸಾಕಷ್ಟು ಬಾರಿ ಶೋರೂಂಗೆ ಬಂದು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದ. ಆದ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಬೇಸತ್ತು ನಿನ್ನೆ ಶೋ ರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

Click

https://newsnotout.com/2024/09/food-corporation-of-india-kannada-news-job-vacency-all-over-india/
https://newsnotout.com/2024/09/muslim-ganesha-chaturti-kannada-news-mother-and-father-v/
https://newsnotout.com/2024/09/kannada-news-bengaluru-daravada-man-issue-with-women/

Related posts

ಮಲಗಿದ್ದವನ ತಲೆಯ ಮೇಲೆ ಹರಿದ ಮೀನು ತುಂಬಿದ ವಾಹನ..! ಮದುವೆ ನಿಶ್ಚಯವಾಗಿದ್ದ ಕಾರ್ಮಿಕನ ದುರಂತ ಸಾವು..!

ಗುಂಡ್ಯ ಚೆಕ್‌ಪೋಸ್ಟ್‌ ಬಳಿ ಲಾರಿ – ಆಂಬುಲೆನ್ಸ್‌ ನಡುವೆ ಅಪಘಾತ, ನಜ್ಜುಗುಜ್ಜಾದ ಆಂಬುಲೆನ್ಸ್ ಮುಂಭಾಗ

ನನಗೆ ಅದನ್ನು ಮುಟ್ಟಲು ಬಿಡಲಿಲ್ಲ ಆದ್ರೆ ಹೀರೋ ಕೈಲಿ ಮುಟ್ಟಿಸಿಕೊಂಡಳು..! ಖ್ಯಾತ ನಟಿ ಹನ್ಸಿಕಾ ಬಗ್ಗೆ ಆ ನಟ ಹೀಗೆ ಹೇಳಿದ್ದೇಕೆ?