ಕ್ರೀಡೆ/ಸಿನಿಮಾ

ಖ್ಯಾತ ನಟಿ ಕುಟುಂಬದ ಕಾರಿನಲ್ಲಿತ್ತು 39 ಲಕ್ಷ ಮೌಲ್ಯದ ಬೆಳ್ಳಿ ಸಾಮಾಗ್ರಿಗಳು,66 ಕೆಜಿ ಬೆಳ್ಳಿ,ಬಿಎಂಡಬ್ಲ್ಯು ಕಾರು ವಶಕ್ಕೆ

ನ್ಯೂಸ್ ನಾಟೌಟ್ : ಖ್ಯಾತ ನಟಿಯೊಬ್ಬರ ಪತಿಯ ಕುಟುಂಬಕ್ಕೆ ಸೇರಿದ ಬಿಎಂಡಬ್ಲ್ಯು ಕಾರಿನಲ್ಲಿ ಅಕ್ರಮವಾಗಿ ಸುಮಾರು ೩೯ ಲಕ್ಷ ಮೌಲ್ಯದ ಬೆಳ್ಳಿ ಸಾಮಾಗ್ರಿಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಚುನಾವಣೆ ಹಿನ್ನೆಲೆ ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಚುನಾವಣಾಧಿಕಾರಿ, ತಹಶೀಲ್ದಾರ್‌ ಡಾ.ಅಶ್ವತ್ಥ್‌ ತಪಾಸಣೆ ನಡೆಸುತ್ತಿದ್ದಾಗ ಬಿಎಂಡಬ್ಲ್ಯು ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಕ್ಸ್​ಗಳು ಪತ್ತೆಯಾಗಿದ್ದು, ಅನುಮಾನಗೊಂಡ ಅವರು ತಪಾಸಣೆ ನಡೆಸಿದಾಗ ಅದರೊಳಗೆ ಬೆಳ್ಳಿ ಸಾಮಾಗ್ರಿಗಳು ಪತ್ತೆಯಾಗಿವೆ. ಅವುಗಳ ಒಟ್ಟು ಮೌಲ್ಯ 39 ಲಕ್ಷವೆಂದು ಅಂದಾಜಿಸಲಾಗಿದೆ. ಸದ್ಯ 66 ಕೆಜಿ ಬೆಳ್ಳಿ ಹಾಗೂ ಬಿಎಂಡಬ್ಲ್ಯು ಕಾರು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಸ್ವತ್ತುಗಳೆಲ್ಲಾ ಖ್ಯಾತ ನಟಿ ದಿವಂಗತ ಶ್ರೀದೇವಿ ಪತಿಯೂ ಆಗಿರುವ ಚಿತ್ರ ನಿರ್ಮಾಪಕ ಬೋನಿ‌ ಕಪೂರ್ ಕುಟುಂಬಕ್ಕೆ ಸೇರಿದ ಕಾರು ಮತ್ತು ಬೆಳ್ಳಿ ಇದಾಗಿದೆ ಎಂದು ಸದ್ಯ ತಿಳಿದು ಬಂದಿರುವ ಮಾಹಿತಿ.ಆದರೆ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಬೋನಿ ಕಪೂರ್ ಫ್ಯಾಮಿಲಿ ಇರಲಿಲ್ಲವಾದರೂ ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಡಾ. ಅಶ್ವಥ್, ಜಪ್ತಿ ಮಾಡಿದ ಬೆಳ್ಳಿ ವಸ್ತುಗಳು ಮತ್ತು ಕಾರು ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.

Related posts

ಸಿನಿಮಾ ಶೂಟಿಂಗ್ ವೇಳೆಯೇ ಸ್ಟಾರ್‌ ನಟ ಹೃದಯಾಘಾತಗೊಂಡು ಸಾವು!10 ದಿನಗಳ ಹಿಂದೆಯಷ್ಟೇ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದ ಹೀರೋ!

ಪುಷ್ಪ ೨: ಸಾಯಿಪಲ್ಲವಿ ಇನ್, ರಶ್ಮಿಕಾ ಮಂದಣ್ಣ ಔಟ್:ವಿವಾದವೇ ಮುಳುವಾಯಿತಾ?

ಎಬಿಡಿ ಎಂಬ ಸ್ಫೋಟಕ ಬ್ಯಾಟ್ಸ್ ಮನ್‌ ಇಲ್ಲದ ಐಪಿಎಲ್ ಹೇಗಿರುತ್ತೋ ಏನೋ..?