ಕರಾವಳಿಬೆಂಗಳೂರುವೈರಲ್ ನ್ಯೂಸ್

ಕಾಲಿನಿಂದಲೇ ಮತ ಹಾಕಿದ ವಿಕಲ ಚೇತನ ಈಜು ಪಟು, ‘ನ್ಯೂಸ್ ನಾಟೌಟ್’ ಜೊತೆ ಮತದಾನ ಖುಷಿಯನ್ನು ಹಂಚಿಕೊಂಡ ವಿಶ್ವಾಸ್

160

ನ್ಯೂಸ್ ನಾಟೌಟ್: ದುರ್ಘಟನೆಯೊಂದರಲ್ಲಿ ತನ್ನೆರಡು ಕೈಗಳನ್ನು ಕಳೆದುಕೊಂಡು ಛಲ ಬಿಡದೆ ತ್ರಿವಿಕ್ರಮನಂತೆ ಈಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಪ್ಯಾರಾ ಈಜು ಪಟು ಕಾಲಿನಿಂದಲೇ ಮತವನ್ನು ಚಲಾಯಿಸಿದ್ದಾರೆ.

ಈ ಮೂಲಕ ಹಲವಾರು ಮಂದಿಗೆ ಮಾದರಿಯಾಗಿದ್ದಾರೆ. ಇವರು ಬೆಂಗಳೂರಿನ ವಿಜಯನಗರದ ಗೋವಿಂದರಾಜನಗರದ ಸರ್ವೋದಯ ವಿದ್ಯಾಲಯದಲ್ಲಿ ಮತ ಚಲಾಯಿಸಿದರು. ಈಜು ಸ್ಪರ್ಧೆ ಅಲ್ಲದೆ ಅತ್ಯುತ್ತಮ ಮೋಟಿವೇಷನಲ್ ಸ್ಪೀಕರ್ , ಡ್ಯಾನ್ಸರ್, ನಟನಾಗಿಯೂ ವಿಶ್ವಾಸ್ ಹೆಸರು ಮಾಡಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ.

See also  ಪ್ರಕಾಶ್ ರಾಜ್ ಓಡಾಡಿದ ಜಾಗಕ್ಕೆ ವಿದ್ಯಾರ್ಥಿಗಳು ಗೋಮೂತ್ರ ಹಾಕಿ ಶುದ್ಧೀಕರಿಸಿದ್ದೇಕೆ ? ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget