ಕ್ರೈಂಜೀವನ ಶೈಲಿ/ಆರೋಗ್ಯಮಹಿಳೆ-ಆರೋಗ್ಯರಾಜಕೀಯರಾಜ್ಯವೈರಲ್ ನ್ಯೂಸ್

ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಶಿಕ್ಷಕಿಗೆ ಹೃದಯಾಘಾತ..! ಕೊನೆಯುಸಿರೆಳೆದ ಶಿಕ್ಷಕಿ ಬಗ್ಗೆ ಚುನಾವಣಾಧಿಕಾರಿ ಹೇಳಿದ್ದೇನು..?

252

ನ್ಯೂಸ್ ನಾಟೌಟ್: ಮತಗಟ್ಟೆಯಲ್ಲಿ ಎಪಿಆರ್ ಒ ಆಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಿ ಯಶೋಧಮ್ಮ( 58) ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಸಮೀಪದ ಗೊಲ್ಲರಗಟ್ಟಿ ಎಂಬಲ್ಲಿ ಹೃದಯಾಘಾತದಿಂದ ಮೃತ ಪಟ್ಟಿರುವ ಘಟನೆ ನಡೆದಿದೆ.

ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿ ಬಿ.ಆನಂದ್, ಮತದಾನಕ್ಕೆ ತೊಂದರೆಯಾಗದ ರೀತಿ ಬೇರೆ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಯಶೋಧಮ್ಮ ಅವರು ನಮ್ಮಲ್ಲಿ ಅರೋಗ್ಯ ಸಮಸ್ಯೆಯ ಕುರಿತು ಏನು ಹೇಳಿಕೊಂಡಿರಲಿಲ್ಲ ಅಲ್ಲದೆ ಮತದಾನ ಆರಂಭದಲ್ಲಿ ಲವಲವಿಕೆಯಿಂದಲೇ ಕರ್ತವ್ಯ ನಿರ್ವಹಿಸಿದ್ದರು. ದಿಢೀರನೆ ಹೃದಯಾಘಾತಕ್ಕೆ ಒಳಗಾಗಿ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಯಶೋದಮ್ಮ ಚಳ್ಳಕೆರೆ ತಾಲೂಕಿನ ಬೊಮ್ಮಸಂದ್ರ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

See also  2 ಸರ್ಕಾರಿ ಬಸ್‌ ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಆಟೋ..! ಇಬ್ಬರು ಸ್ಥಳದಲ್ಲೇ ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget