ರಾಜಕೀಯರಾಜ್ಯವೈರಲ್ ನ್ಯೂಸ್

ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು, ಲೋಕಸಭಾ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಶಾಕ್..!

ನ್ಯೂಸ್ ನಾಟೌಟ್ : ‘ದಕ್ಷಿಣ ಶಿಕ್ಷಕರ ಕ್ಷೇತ್ರ’ದ ವಿಧಾನ ಪರಿಷತ್‌ ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರು ಗೆಲುವು ಸಾಧಿಸಿದ್ದಾರೆ.

ಮೂರು ಚುನಾವಣೆಗಳ ನಂತರ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮರಿತಿಬ್ಬೇಗೌಡ ಐದನೇ ಬಾರಿಗೆ ನಿಂತು ಈ ಬಾರಿ ಸೋಲು ಕಂಡಿದ್ದಾರೆ. ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಬಂದಿರುವ ರಿಯಲ್‌ ಎಸ್ಟೇಟ್ ಉದ್ಯಮಿ, ಅರಣ್ಯ ವಸತಿ ಮತ್ತು ವಿಹಾರಧಾಮದ ಮಾಜಿ ಅಧ್ಯಕ್ಷ ಕೆ.ವಿವೇಕಾನಂದ ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.

ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯುಳ್ಳ ಕ್ಷೇತ್ರದ ಚುನಾವಣೆ ಜೂನ್‌ 3ರಂದು ನಡೆದಿತ್ತು. ಇಂದು ಮತ ಎಣಿಕೆ (ಜೂ.6) ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಬೆಳಿಗ್ಗೆ 8ರಿಂದ ಆರಂಭಗೊಂಡಿತ್ತು. ನಾಲ್ಕು ಜಿಲ್ಲೆಗಳ 11,998 ಪುರುಷರು, 9,550 ಮಹಿಳೆಯರು, ಓರ್ವ ಲಿಂಗತ್ವ ಅಲ್ಪಸಂಖ್ಯಾತ ಸೇರಿದಂತೆ ಒಟ್ಟು 21,549 ಮತದಾರರ ಪೈಕಿ 18,979 ಮಂದಿ ಮತ ಚಲಾಯಿಸಿದ್ದು, ಶೇ 88.07ರಷ್ಟು ಮತದಾನವಾಗಿದೆ. ಇಲ್ಲಿ ಮತದಾರರಾಗಿರುವ ಪ್ರೌಢಶಾಲಾ ಶಿಕ್ಷಕರು, ಪಿಯು ಕಾಲೇಜುಗಳ ಉಪನ್ಯಾಸಕರು, ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಬೋಧಕ ವರ್ಗದವರು ಯಾರಿಗೆ ಬೆಂಬಲ ನೀಡಿದ್ದಾರೆ ಎಂಬ ಚರ್ಚೆಗೆ ಈಗ ತೆರೆಬಿದ್ದಿದೆ.

Click 👇

https://newsnotout.com/2024/06/n-chandrababu-naidu-oath-delayed-for-political-reason
https://newsnotout.com/2024/06/loka-sabha-election-and-bjp-ministers-are-lost-thair-majority
https://newsnotout.com/2024/06/mangaluru-bhajaragadala-and-congress-issue-at-celebration
https://newsnotout.com/2024/06/x-tweeter-and-its-rules-on-users-kannada-news

Related posts

ರಾಮನ ಭಜನೆ ಹಾಡಿದ ಫಾರೂಕ್‌ ಅಬ್ದುಲ್ಲಾ..! ಇಲ್ಲಿದೆ ವೈರಲ್ ವಿಡಿಯೋ

12 ಲಕ್ಷ ರೂಪಾಯಿ ಕಳ್ಕೊಂಡದ್ದು ಹೇಗೆ ವೃದ್ಧ ..?ಆಕೆಯ ಆ ಒಂದು ವಿಡಿಯೋ ಕಾಲ್ ವೃದ್ಧ ನ ನಿದ್ದೆ ಕೆಡಿಸಿತ್ತಾ? ಪೊಲೀಸರು ಹೇಳಿದ್ದೇನು?

30 ವರ್ಷದ ಮಹಿಳೆಯನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ಗ್ರೇಟ್‌ ಖಲಿ..! ಇಲ್ಲಿದೆ ವೈರಲ್ ವಿಡಿಯೋ