ದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಬೆಣ್ಣೆ ದೋಸೆಯಲ್ಲಿ ಮತದಾನ ಜಾಗೃತಿ..! ಏನಿದು ಅಕ್ಷರ ದೋಸೋತ್ಸವ..?

ನ್ಯೂಸ್ ನಾಟೌಟ್: ಲೋಕಸಭಾ ಕ್ಷೇತ್ರದಲ್ಲಿ ಮೇ 7 ರ ಮಂಗಳವಾರ ಮತದಾನ ನಡೆಯುತ್ತಿದೆ. ದಾವಣಗೆರೆ ಬೆಣ್ಣೆ ನಗರಿ ಎಂದು ಹೆಸರು ಪಡೆದಿದೆ. ಬೆಣ್ಣೆ ದೋಸೆಗೆ ಬ್ರಾಂಡ್ ಆಗಿದೆ. ಆದ್ದರಿಂದ ದೋಸೆ ಕಾವಲಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ. ದೋಸೆ ಕಾವಲಿ ಮೇಲೆ ದೋಸೆಯ ಹಿಟ್ಟನ್ನು ಬಳಸಿ ‘ನಮ್ಮ ಮತ, ನನ್ನ ಹಕ್ಕು’ ‘ತಪ್ಪದೇ ಮೇ 7ರಂದು ಮತದಾನ ಮಾಡಿ’ ಎಂಬ ಘೋಷಣೆಯನ್ನು ದೋಸೆಯಲ್ಲಿ ಮೂಡಿಸಿ ದಾವಣಗೆರೆಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ‌

ನಗರದ ಜಯದೇವ ವೃತ್ತದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸ್ವೀಪ್ ಸಮಿತಿಯಿಂದ ಏರ್ಪಡಿಸಲಾದ ದೋಸೆಯ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ. ವಿ. ‘ನನ್ನ ಮತ, ನನ್ನ ಹಕ್ಕು’ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ. ಇಟ್ನಾಳ್ ‘ಮೈ ವೋಟ್, ಮೈ ವಾಯ್ಸ್ ಮೇ 7’ ಎಂದು ದೋಸೆ ಹಿಟ್ಟಿನಲ್ಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು. ಡಾ. ವೆಂಕಟೇಶ್ ಎಂ. ವಿ. ಮಾತನಾಡಿ, “ಅಕ್ಷರ ದೋಸೋತ್ಸವದ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನವಾಗಬೇಕೆಂಬ ಗುರಿ ನಮ್ಮದಾಗಿದೆ” ಎಂದರು.

Related posts

ಸುಳ್ಯ: ಹಿಂದೂ ಯುವತಿ ಜೊತೆ ಕಾರಿನಲ್ಲಿ ಬಂದ ಅನ್ಯಕೋಮಿನ ಯುವಕನ ತಡೆದ ಪ್ರಕರಣ, ಕ್ಲೈ ಮ್ಯಾಕ್ಸ್ ನಲ್ಲಿ ನಡೆದಿದ್ದೇನು..? ಇಲ್ಲಿದೆ ಡಿಟೇಲ್ಸ್

ಸುಪ್ರೀಂ ಕೋರ್ಟ್ ವಕೀಲರಾಗಿ ಶೇಖರ್ ನೇಮಕ, ಒಕ್ಕಲಿಗ ಸಮುದಾಯಕ್ಕೆ ದೊಡ್ಡ ಸ್ಫೂರ್ತಿ

ಸುಳ್ಯ: ಸ್ಲ್ಯಾಬ್ ನಿಂದ ಮುಚ್ಚಲ್ಪಟ್ಟಿದ್ದ ಚರಂಡಿಯೊಳಗೆ ಬಿದ್ದ ವ್ಯಕ್ತಿ..! ಸ್ಲಾಬ್ ತೆಗೆದು ರಕ್ಷಿಸಿದ ಸ್ಥಳೀಯರು..! ಏನಿದು ಘಟನೆ?