ಕ್ರೈಂ

ತೋಟದ ಮನೆಯ ಮರಳಿನ ರಾಶಿಯೊಳಗಿತ್ತು ಕಂತೆ-ಕಂತೆ ಹಣ! ಮತದಾನದ ಮುಂಚಿನ ದಿನದ ಹಣದ ಬೇಟೆಯಲ್ಲೊಂದು ರೋಚಕ ಸ್ಟೋರಿ!

ನ್ಯೂಸ್‌ ನಾಟೌಟ್‌: ಮತದಾನದ ಹಿಂದಿನ ದಿನ ಮೇ 9 ರಂದು ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನಲ್ಲಿ ಚುನಾವಣಾಧಿಕಾರಿಗಳು ಕಾರ್ಯಾಚರಣೆ ನಡೆಸಿ, ತೋಟದ ಮನೆಯ ಮರಳಿನ ರಾಶಿಯಲ್ಲಿ ಹೂತಿಟ್ಟಿದ್ದ 50 ಲಕ್ಷ ರೂಪಾಯಿ ದುಡ್ಡನ್ನು ಜೆಸಿಬಿಯಿಂದ ಅಗೆದು ಹೊರಗೆ ತೆಗೆದ ಘಟನೆ ನಡೆದಿದೆ.

ಹೆಚ್ ಡಿ ಕೋಟೆ ತಾಲೂಕಿನ ದೇವಲಾಪುರ ಕಾಲೋನಿಯ ಈ ತೋಟದ ಮನೆಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ನಗದನ್ನು ಬಿಜೆಪಿ ಮತದಾರರಿಗೆ ಹಂಚಲು ಇಟ್ಟಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಚುನಾವಣಾಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಮರಳಿನ ಒಳಗೆ ಮತ್ತಷ್ಟು ಹಣ ಬಚ್ಚಿಟ್ಟಿರುವ ಮಾಹಿತಿ ದೊರೆತಿತ್ತು. ಆದರೆ ಜೆಸಿಬಿಯಿಂದ ಮರಳು ರಾಶಿ ತೆರವುಗೊಳಿಸಿದಾಗ 50 ಲಕ್ಷ ರೂಪಾಯಿ ಮಾತ್ರ ದಾಖಲೆ ಇಲ್ಲದೆ ದೊರಕಿದೆ.

ಚುನಾವಣಾಧಿಕಾರಿಗಳ ದಾಳಿ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಗುರುಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. ತಹಶೀಲ್ದಾರ್ ಅವರು ಕಾಂಗ್ರೆಸ್, ಜೆಡಿಎಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ಹಣ ಹಂಚಿದರೆ ತಹಶೀಲ್ದಾರ್ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ವರದಿ ತಿಳಿಸಿದೆ.

Related posts

ಮೂಡುಬಿದಿರೆ: ವಿದ್ಯಾರ್ಥಿನಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! ಊರ ಪ್ರಿಯಕರನೊಂದಿಗೆ ಕೇರಳದಲ್ಲಿ ಮದುವೆ..!

ಚಾಕೊಲೇಟ್ ಸೇವಿಸಿದ ಇಬ್ಬರು ಪುಟ್ಟ ಬಾಲಕಿಯರ ನಿಗೂಢ ಅಂತ್ಯ..! ನೆರೆಮನೆಯವ ಕೊಟ್ಟ ಚಾಕಲೇಟ್ ನಲ್ಲಿ ಅಂತಹದ್ದೇನಿತ್ತು?

ಶ್ರೀಮಂತ ಮನೆಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಫೋಟೋಗ್ರಾಫರ್..! ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕಿದ ಯುವತಿ ಮನೆಯವರು..!