ಕರಾವಳಿ

ಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸರಿಂದ ಹದ್ದಿನ ಕಣ್ಗಾವಲು

ನ್ಯೂಸ್‌ನಾಟೌಟ್‌: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ದಿನ ಸಮೀಪಿಸುತ್ತಿರುವಂತೆ ಚುನಾವಣಾ ಆಯೋಗ ಮತದಾರರಿಗೆ ಆಮಿಷವೊಡ್ಡುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮಾರ್ಚ್‌ ಅಂತ್ಯದೊಳಗೆ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಅಕ್ರಮ ತಡೆಯುವುದಕ್ಕಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ತಪಾಸಣೆ ನಡೆಸುತ್ತಿದ್ದಾರೆ.

ಪ್ರಮುಖ ಆಯಕಟ್ಟಿನ ಜಾಗದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ ನಗರದ 11 ಚೆಕ್ ಪೋಸ್ಟ್‌ಗಳಲ್ಲಿ ನಿರಂತರವಾಗಿ ತಪಾಸಣೆ ನಡೆಯುತ್ತಿದೆ. ಅಂತಾರಾಜ್ಯ ಚೆಕ್ ಪೋಸ್ಟ್‌ಗಳಲ್ಲೂ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

Related posts

ಉಪ್ಪಿನಂಗಡಿ: ನಿಯಂತ್ರಣ ಕಳೆದುಕೊಂಡ ಚಾಲಕ..! ಶಾಲಾ ಮಕ್ಕಳಿದ್ದ ಬಸ್ ಪಲ್ಟಿ!

ಅಜ್ಜಾವರ : ಪಾದಚಾರಿಗೆ ಗುದ್ದಿದ ಬೈಕ್ -ದಂಪತಿಗೆ ಗಂಭೀರ ಗಾಯ

ಮೈಮೇಲೆ ಅಣಬೆ ಇರುವ ಕಪ್ಪೆ ಎಲ್ಲಾದ್ರು ನೋಡಿದ್ದೀರಾ?ಕಾರ್ಕಳದ ಕೆರೆಯೊಂದರಲ್ಲಿ ವಿಚಿತ್ರ ಕಪ್ಪೆ..!ವಿಶ್ವದಲ್ಲಿ ಇಂತಹ ಜೀವಿ ಇದೇ ಮೊದಲು ಎಂದ ವಿಜ್ಞಾನಿಗಳು..!