ಕರಾವಳಿ

ಈಶ್ವರ ಮಂಗಲದಲ್ಲಿ KSRTC ಬಸ್ ಕಂಡೆಕ್ಟರ್‌ ಗೂಂಡಾಗಿರಿ..!

ನ್ಯೂಸ್ ನಾಟೌಟ್: ಸಾರ್ವಜನಿಕರು ಪ್ರಯಾಣಿಸುವ ಬಸ್ ನಲ್ಲಿ ಕಂಡೆಕ್ಟರ್ ಚಿಲ್ಲರೆ ವಿಷಯಕ್ಕೆ ಜಗಳ ಆಡುವುದು, ಕ್ಯಾತೆ ತೆಗೆಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕಂಡೆಕ್ಟರ್ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಯಾಣಿಕನ ಎದೆಗೆ ಕಾಲಿನಿಂದ ಒದ್ದು ಬಸ್ ನಿಂದ ರಸ್ತೆಗೆ ದೂಡಿ ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದಿಂದ ವರದಿಯಾಗಿದೆ.

ಈಶ್ವರಮಂಗಲ ಪೇಟೆಯ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ಕೆಎ 21 ಎಫ್ 0002 ನಂಬರ್‌ನ ಬಸ್ ನಿರ್ವಾಹಕ ಪ್ರಯಾಣಿಕನಿಗೆ ಕಾಲಿನಿಂದ ತುಳಿದು ಹೊರಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾನಮತ್ತನಾಗಿ ಬಸ್ ಏರಿದ್ದ ಕೃಷ್ಣಪ್ಪ ಎಂಬುವರನ್ನು ಬಸ್ಸಿನ ನಿರ್ವಾಹಕ ತಡೆದು ಅವರ ಕೊಡೆಯನ್ನು ರಸ್ತೆಗೆ ಎಸೆದು ಆತನನ್ನು ಬಸ್ಸಿನಿಂದ ಕೆಳಗಿಳಿಸಲು ಕೈಯಿಂದ ಹೊಡೆದು ಹಲ್ಲೆ ನಡೆಸಿ ಕೊನೆಗೆ ಕಾಲಿನಿಂದ ಆತನ ಎದೆಗೆ ತುಳಿದು ರಸ್ತೆಗೆ ದೂಡಿ ಹಾಕಿ ಆತನಿಗೆ ಜೋರು ಮಾಡಿದ್ದಾನೆ. ರಸ್ತೆಗೆ ಬಿದ್ದ ಆತನನ್ನು  ಅಲ್ಲಿಯೇ ಬಿಟ್ಟು ನೇರವಾಗಿ ಬಸ್ ಚಲಾಯಿಸಿಕೊಂಡು ಹೋಗುವ ವಿಡಿಯೋ ವೈರಲ್ ಆಗುತ್ತಿದೆ.

ಸದ್ಯ ಈ ವಿಚಾರ ಇದೀಗ ಕೆಎಸ್‌ಆರ್‌ಟಿಸಿ ಮೇಲಾಧಿಕಾರಿಗಳ ತನಕ ತಲುಪಿದೆ. ಕೂಡಲೇ ಸಂಬಂಧಪಟ್ಟ ಕೆಂಡೆಕ್ಟರ್ ಅನ್ನು ಅಮಾನತು ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿ ಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

Related posts

ಅರುಣ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ದಕ್ಷಿಣ ಕನ್ನಡ ಮಹಿಳಾ ಪೊಲೀಸ್‌ ಠಾಣೆಯಲ್ಲಿ FIR ದಾಖಲು

ಓವರ್‌ಟೇಕ್ ಭರದಲ್ಲಿ ಹಿಂಬದಿಯಿಂದ ಬಂದು ಬೈಕ್‌ಗೆ ಡಿಕ್ಕಿಯಾದ ಕಾರು,ಬೈಕ್ ಸವಾರನಿಗೆ ಗಂ*ಭೀರ ಗಾಯ

ಪ್ರೇಮಿಗಳಿಗೆ ಬಿಗ್ ಶಾಕ್ ನೀಡಿದ ಪಶುಸಂಗೋಪನಾ ಇಲಾಖೆ