ಕ್ರೈಂ

ಎಗ್ ರೈಸ್ ತಿನ್ನುವಾಗ ಗುರಾಯಿಸಿದ್ದಕ್ಕೆ ಹೊಡೆದಾಟ

ನ್ಯೂಸ್ ನಾಟೌಟ್: ಎಗ್ ರೈಸ್ ತಿನ್ನುವಾಗ ದುರುಗುಟ್ಟಿದ ಎನ್ನುವ ಕ್ಷುಲ್ಲಕ ವಿಚಾರಕ್ಕೆ ಯುವಕರ ಗುಂಪಿನ ನಡುವೆ ಹೊಡೆದಾಟ ನಡೆದು ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ತಡರಾತ್ರಿ ಬೀದಿ ಬದಿಯ ಸ್ಟಾಲ್ ವೊಂದರಲ್ಲಿ ಇತ್ತಂಡಗಳ ನಡುವೆ ಹೊಡೆದಾಟವಾಗಿದೆ.

ಬಿಸಿಯಾದ ಬಾಣಲೆಯಿಂದ ಬರ್ಬರವಾಗಿ ಹಲ್ಲೆ ನಡೆಸಿರುವ ನಡೆಸಲಾಗಿದೆ. ಓರ್ವನಿಗೆ ಚೂರಿಯಿಂದ ಇರಿಯಲಾಗಿದೆ. ಇಬ್ಬರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಕೂಡಾ ಊಟಕ್ಕಾಗಿ ಸ್ಟಾಲ್ ಬಳಿ ಬಂದಾಗ ಹೊಡೆದಾಟ ನಡೆದಿದೆ. ಇಬ್ಬರು ಗಾಯಾಳುಗಳು ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ. ಇಸ್ಟ್ ಎಂಡ್ ರಸ್ತೆಯ ಕಾರ್ತಿಕ್  ಮತ್ತು ಜಯನಗರ 9ನೇ ಬ್ಲಾಕ್ ನ ಡಿ. ಮಣಿಕಂಠ ಹಲ್ಲೆಗೊಳಗಾದವರು. ಇಬ್ಬರು ಸ್ವ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಕಾರ್ತಿಕ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಚೂರಿ ಇರಿತಕ್ಕೊಳಗಾದ ಮಣಿಕಂಠ ಜಯನಗರ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Related posts

ಕಾಡುಗಳ್ಳ ವೀರಪ್ಪನ್ ನನ್ನು ಗುಂಡಿಕ್ಕಿ ಕೊಂದ ಪೊಲೀಸ್ ಅಧಿಕಾರಿ ಸಸ್ಪೆಂಡ್..! ನಿವೃತ್ತಿಯ ಒಂದು ದಿನ ಮೊದಲೇ ಅಮಾನತು ಆಗಿದ್ದೇಗೆ..?

ಕೊಕ್ಕಡ:ಅನಾರೋಗ್ಯದಿಂದ ಕಾಲೇಜ್ ವಿದ್ಯಾರ್ಥಿನಿ ಮೃತ್ಯು,ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ..

ಕುಸ್ತಿ ಒಕ್ಕೂಟ ಮುಖ್ಯಸ್ಥನ ವಿರುದ್ಧ ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಶೋಷಣೆ ಆರೋಪ! ಪ್ರತಿಭಟನೆಗಿಳಿದ ಕುಸ್ತಿಪಟುಗಳು!