ಜೀವನಶೈಲಿವಿಡಿಯೋ

ನಾಯಿಯಾಗಬೇಕೆಂಬ ವಿಚಿತ್ರ ಕನಸು ಕಂಡ ವ್ಯಕ್ತಿಯ ಕನಸು ನನಸು

168
Spread the love

ನ್ಯೂಸ್ ನಾಟೌಟ್ : ಕೆಲವೊಬ್ಬರು ತಮ್ಮ ಪ್ರತಿಭೆಯಿಂದ ಮತ್ತು ಸಾಹಸದಿಂದ ಎಲ್ಲೆಡೆ ಸುದ್ದಿಯಾಗುತ್ತಾರೆ. ಆದರೆ ಇಲ್ಲೊಬ್ಬ ತಾನು ನಾಯಿಯಾಗಿ ಎಲ್ಲೆಡೆ ವೈರಲ್ ಆಗುತ್ತಿದ್ದಾನೆ.ಅರೆ ! ಇದೇನಿದು? ಒಬ್ಬ ವ್ಯಕ್ತಿ ನಾಯಿಯಾಗಲು ಹೇಗೆ ಸಾಧ್ಯ? ನಾಯಿಯಂತೆ ನಟಿಸುವುದಾದರೆ ಸರಿ, ನಾಯಿಯಂತೆ ಕಾಣಿಸಿಕೊಳ್ಳುವುದು ಅಂದರೆ ತಮಾಷೆನಾ? ಅಂತೆಲ್ಲ ನೂರಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು.ಇದಕ್ಕಾಗಿ ಆತ ಮಾಡಿದ್ದಾರು ಏನೆಂದು ಮುಂದೆ ಓದಿ..


ಯಾರಾತ?


ಜಪನೀಸ್ ಟೋಕೊ ಎಂಬ ವ್ಯಕ್ತಿ ತಾನು ನಾಯಿಯಾಗ ಬೇಕು ಎಂಬ ಆಸೆ ಇಟ್ಟುಕೊಂಡಿದ್ದ. ಯಾರೊಬ್ಬರೂ ಯೋಚಿಸದ ಕನಸು ಇವನದಾಗಿತ್ತು . ಅದರಂತೆ ಇವನ ವಿಚಿತ್ರ ಆಸೆಯು ನನಸಾಗಿದೆ. ಇದಕ್ಕಾಗಿ ಇವನು ಮಿಲಿಯನ್ (ಅಂದಾಜು ರೂ. 12 ಲಕ್ಷ) ಖರ್ಚು ಮಾಡಿದ್ದಾನೆ ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ಯೂಟ್ಯೂಬರ್ ಆಗಿರುವ ಟೊಕೊ ಬಾಲ್ಯದಿಂದಲೂ ಪ್ರಾಣಿಗಳ ಮೇಲೆ ವಿಪರೀತ ಪ್ರೀತಿ ಹೊಂದಿದ್ದ. ತಾನು ಪ್ರಾಣಿಯಾಗಬೇಕು ಎಂಬ ಕನಸನ್ನು ಕಂಡಿದ್ದ. ಈಗ ತನ್ನ ಇಚ್ಛೆಯಂತೆ ಇದೀಗ ನಾಯಿ ರೂಪವನ್ನು ತಾಳಿದ್ದಾನೆ.ಹೌದು, ಅವನು ತನ್ನ ಇಚ್ಛೆಯನ್ನು ಪೂರೈಸಲು ನಾಯಿಯ ಉಡುಪನ್ನು ಬಳಸುತ್ತಿದ್ದಾನೆ. ವರದಿಯ ಪ್ರಕಾರ, ಟೊಕೊ ತನ್ನ ನಾಯಿಯ ವೇಷಭೂಷಣವನ್ನು ತಿಂಗಳಿಗೆ ಕೆಲವು ಬಾರಿ ಧರಿಸುತ್ತಾನೆ ಮತ್ತು ಅವುಗಳು ತಿನ್ನುವ, ಆಟವಾಡುವ ಅಥವಾ ತರಬೇತಿ ನೀಡುವ ರೀತಿಯನ್ನು ಅನುಸರಿಸುವ ವಿಡಿಯೋಗಳನ್ನು ನಿಯಮಿತವಾಗಿ ಅಪ್‌ಲೋಡ್ ಮಾಡುತ್ತಾನೆ. ಇದನ್ನು ನೋಡಿದ ನೆಟ್ಟಿಗರಲ್ಲಿ ಕೂತೂಹಲ ಮೂಡುವಂತೆ ಮಾಡಿದೆ.

See also  ಪದೇ ಪದೆ ಕೈ ಕೊಡುತ್ತಿರುವ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್
  Ad Widget   Ad Widget   Ad Widget   Ad Widget   Ad Widget   Ad Widget