Latestಬೆಂಗಳೂರುರಾಜ್ಯವೈರಲ್ ನ್ಯೂಸ್ಶಿಕ್ಷಣ

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೈತಿಕ ಪಠ್ಯದಡಿಯಲ್ಲಿ ಲೈಂಗಿಕ ಶಿಕ್ಷಣ ನೀಡಲು ಸರ್ಕಾರದ ನಿರ್ಧಾರ..! ಹಲವರಿಂದ ಆಕ್ಷೇಪ..!

644

ನ್ಯೂಸ್ ನಾಟೌಟ್: ಕರ್ನಾಟಕದಲ್ಲಿ ಪ್ರಸ್ತಕ ವರ್ಷದಿಂದಲೇ ಶಾಲೆಗಳಲ್ಲಿ ನೈತಿಕ ಶಿಕ್ಷಣ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ನೈತಿಕ ಪಠ್ಯದಡಿ ಲೈಂಗಿಕ ಶಿಕ್ಷಣ ಪರಿಚಯಿಸಲು ಸರ್ಕಾರ ಮುಂದಗಿದೆ ಮಕ್ಕಳ ತರಗತಿ ಹಾಗೂ ವೈಯೋಮಾನಕ್ಕೆ ತಕ್ಕಂತೆ DSERTಯಿಂದ ಲೈಂಗಿಕ ಶಿಕ್ಷಣ ಪಠ್ಯ ಸಿದ್ಧ ಮಾಡಲಾಗಿದ್ದು, ಪ್ರಾರಂಭಿಕ ಹಂತದಲ್ಲಿ 8 ರಿಂದ 12 ನೇ ತರಗತಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಲು‌ ಸರ್ಕಾರ ಪ್ಲಾನ್ ಮಾಡಿತ್ತು. ಈಗ DSERT ವಯೋಮಿತಿ ಅನುಗುಣವಾಗಿ ನೈತಿಕ ಪಠ್ಯದಡಿ ಲೈಂಗಿಕ ಪಠ್ಯ ಪರಿಚಯಿಸಲು ಮುಂದಾಗಿದೆ ಎನ್ನಲಾಗಿದೆ.

ಯಾವ ವಯೋಮಿತಿಗೆ ಏನೆಲ್ಲ ನೈತಿಕ ಪಠ್ಯ ಅವಶ್ಯಕತೆ ಇದೆ. ವಾರಕ್ಕೆ ಎಷ್ಟು ತರಗತಿಗಳು ಬೇಕು ಎಂದು DSERT(Department of State Educational Research and Training) ಪ್ರತ್ಯೇಕ ಪಠ್ಯ ನೀಡಲು ಮುಂದಾಗಿದ್ದು, ಇದೇ ವರ್ಷದಿಂದ ಲೈಂಗಿಕ ಶಿಕ್ಷಣವು ಶುರುವಾಗಲಿದೆ ಎಂದು ವರದಿ ತಿಳಿಸಿದೆ.

ಪ್ರಾರಂಭದಲ್ಲಿ ವಾರಕ್ಕೆ ಎರಡು ತರಗತಿ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಲು ಈ ಕ್ರಮಕ್ಕೆ ಮುಂದಾಗಿದ್ದು, ಎರಡು ಅವಧಿಯಲ್ಲಿ ನೈತಿಕ ಮೌಲ್ಯದ ಶಿಕ್ಷಣ ಬೋಧನೆ ಮೂಲಕ ಮಕ್ಕಳಲ್ಲಿ ಲೈಂಗಿಕ ಶಿಕ್ಷಣದ ತಿಳವಳಿಕೆ ನೀಡಲು ಮುಂದಾಗಿದೆ . ಮಕ್ಕಳ ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು, ಸಹಜವಾಗಿ ಆಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು, ಅವುಗಳೆಲ್ಲವನ್ನೂ ಸಹಜ ರೀತಿಯಲ್ಲಿ ಸ್ವೀಕರಿಸುವ ಮತ್ತು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಲೈಂಗಿಕ ಶಿಕ್ಷಣ ನೀಡಲು ಇಲಾಖೆ ಪ್ಲಾನ್ ಮಾಡಿಕೊಂಡಿದೆ.

ಶಾಲೆಗಳಲ್ಲಿ ನೈತಿಕ ಶಿಕ್ಷಣದ ಅಡಿಯಲ್ಲಿ ಲೈಂಗಿಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ‌ ಮುಂದಾಗಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ. ಶಿಕ್ಷಣ ಇಲಾಖೆಯ ಈ ನಡೆ ಈಗ ಹಿಂದೂಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ.

ಬಿ.ಎಸ್ ಯಡಿಯೂರಪ್ಪ ಮೊಮ್ಮಗನ ಅದ್ಧೂರಿ ಆರತಕ್ಷತೆಯಲ್ಲಿ ಜೆ.ಪಿ ನಡ್ಡಾ ಮತ್ತು ಉಪರಾಷ್ಟ್ರಪತಿ ಭಾಗಿ, ಇಂದು(ಜೂ.8) ವಿವಾಹ

See also  11 ವರ್ಷದ ಬಳಿಕ ಸೌಜನ್ಯ ರೇಪ್‌-ಮರ್ಡರ್‌ ಕೇಸ್‌ಗೆ ರೋಚಕ ಟ್ವಿಸ್ಟ್, ಸಂತೋಷ್ ರಾವ್ ನಿರಪರಾಧಿಯಾದ್ರೆ ಸೌಜನ್ಯಳನ್ನು ಕೊಂದವರು ಯಾರು? ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದೇನು?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget