ಕ್ರೈಂವೈರಲ್ ನ್ಯೂಸ್ಶಿಕ್ಷಣ

ಪುಟ್ಟ ಮಕ್ಕಳ ಕೈಗೆ ಬಿಸಿ ಎಣ್ಣೆ ಸುರಿದದ್ದೇಕೆ ಶಿಕ್ಷಕ..? ವಿದ್ಯಾರ್ಥಿಗಳು ಅಂತದ್ದೇನು ಮಾಡಿದ್ರು..? ಶಿಕ್ಷಣ ಇಲಾಖೆಯ ತನಿಖೆಯಲ್ಲಿ ಬಯಲಾದದ್ದೇನು?

ನ್ಯೂಸ್‌ ನಾಟೌಟ್‌: ಸರ್ಕಾರಿ ಶಾಲೆಯೊಂದರ 25 ಮಕ್ಕಳಿಗೆ ಬಲವಂತವಾಗಿ ಬಿಸಿ ಎಣ್ಣೆ ಸುರಿದು ಮಕ್ಕಳು ಪರಸ್ಪರರ ಅಂಗೈಗೆ ಬಿಸಿ ಎಣ್ಣೆಯಿಂದ ಸುಟ್ಟುಕೊಳ್ಳುವಂತೆ ಶಿಕ್ಷಕ ಶಿಕ್ಷಿಸಿದ ಅಮಾನವೀಯ ಘಟನೆ ಛತ್ತೀಸ್ ಗಢದ ಬಸ್ತರ್ ವಿಭಾಗದ ಕೊಂಡಗಾಂವ್ ಗ್ರಾಮದ ವರದಿಯಾಗಿದೆ.

ವಿದ್ಯಾರ್ಥಿನಿಯೊಬ್ಬಳು ಶೌಚಾಲಯದ ಹೊರಗೆ ಮಲ ವಿಸರ್ಜನೆ ಮಾಡಿದ ಕಾರಣಕ್ಕೆ ಈ ಶಿಕ್ಷೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆ ಘಟನೆ ಬಗ್ಗೆ ವಿಚಾರಣೆಗೆ ಆದೇಶ ನೀಡಿದ್ದು, ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇತರ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸುವಂತೆ ಆದೇಶಿಸಿದೆ.

ಘಟನೆಯ ಸಂತ್ರಸ್ತ ಮಕ್ಕಳು 11-12 ವರ್ಷದವರು ಎಂದು ಮಾಹಿತಿ ದೊರಕಿದ್ದು, ಅಂಗೈಯಲ್ಲಿ ಸುಟ್ಟ ಗುಳ್ಳೆಗಳಾಗಿವೆ. ವಿಚಿತ್ರವೆಂದರೆ ಕೊಂಡಗಾಂವ್ ಜಿಲ್ಲಾ ಶಿಕ್ಷಣಾಧಿಕಾರಿ ಮಧುಲಿಕಾ ತಿವಾರಿ, ಎಣ್ಣೆ ಅಷ್ಟೊಂದು ಬಿಸಿ ಇರಲಿಲ್ಲ ಎಂಬ ಸಬೂಬು ನೀಡಿ 25 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ ಊಟದ ವೇಳೆ, ಶಿಕ್ಷಕರು ಊಟಕ್ಕೆ ತೆರಳಿದ್ದರು. ಮರಳಿದಾಗ, ಯಾರೋ ವಿದ್ಯಾರ್ಥಿಗಳು ಶೌಚಾಲಯದ ಹೊರಗೆ ವಿಸರ್ಜಿಸಿರುವುದು ಕಂಡುಬಂದಿದೆ. ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದಾಗ ಯಾರೂ ಒಪ್ಪಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಶಿಕ್ಷೆಗೆ ಶಿಕ್ಷಕರು ಮುಂದಾಗಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನದ ಬಿಸಿಯೂಟದ ಅಡುಗೆಮನೆಯಿಂದ ಬಿಸಿ ಎಣ್ಣೆ ತಂದು, ಪರಸ್ಪರರ ಕೈಗೆ ಎಣ್ಣೆ ಸುರಿಯುವಂತೆ ಬಲವಂತಪಡಿಸಿದರು ಎಂದು ಹೇಳಲಾಗಿದೆ.

https://newsnotout.com/2023/12/muslim-congress-hindu-muslim-kannadanews/

Related posts

ಮದ್ಯಪಾನದ ಚಟ, ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ಆತ್ಮಹತ್ಯೆ

ಖರೀದಿಸಿ ಮನೆಗೆ ತಂದಿದ್ದ ಹೂಕೋಸಲ್ಲಿ ಬೆಚ್ಚಗೆ ಮಲಗಿದ್ದ ಹಾವು..! ಗಾಬರಿಗೊಂಡ ಮಹಿಳೆ ಏನ್ಮಾಡಿದ್ರು ಗೊತ್ತಾ? ವಿಡಿಯೋ ವೀಕ್ಷಿಸಿ..

ಮಂಗಳೂರು: ಶರಾವು ಗುಳಿಗನ ಕೋಪಕ್ಕೆ ತುತ್ತಾದ ‘ಹಂಪನಕಟ್ಟೆ ಸ್ಮಾರ್ಟ್ ಸಿಟಿ’..!, ಮೂರು ವರ್ಷದ ಹಿಂದೆ 70 ಕೋಟಿ ಮಂಜೂರಾಗಿದ್ದರೂ ಕಾಮಗಾರಿ ಮುಗಿಸಲು ಒದ್ದಾಟ..! ಅಷ್ಟಕ್ಕೂ ಕಾಂಟ್ರಾಕ್ಟರ್ ಮಾಡಿದ ಆ ತಪ್ಪೇನು..?