ನ್ಯೂಸ್ ನಾಟೌಟ್: ರಾಜ್ಯ ಶಿಕ್ಷಣ ಇಲಾಖೆ ಮುಂಬರುವ 2025/26ನೇ ಶೈಕ್ಷಣಿಕ ಸಾಲಿನಿಂದ ಫ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಬೋಧನೆಗೆ ತಯಾರಿ ನಡೆಸಿದೆ ಎಂದು ವರದಿ ತಿಳಿಸಿದೆ.
ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಯ ಹಂತದಲ್ಲಿಯೇ ಇದೆ. ಸದ್ಯ ಸರ್ಕಾರ ವಾರಕ್ಕೆ ಎರಡು ತರಗತಿ ನಡೆಸಲು ನಿರ್ಧರಿಸಿದ್ದು, ಶಾಲಾ ಶಿಕ್ಷಣ ಇಲಾಖೆಯ ನಡೆಗೆ ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಸರಿಯಾದ ಲೈಂಗಿಕ ಶಿಕ್ಷಣ ಅನಿವಾರ್ಯ ಎಂದು ರಾಜ್ಯ ಶಿಕ್ಷಣ ಇಲಾಖೆ ಹೇಳಿದೆ.
ಲೈಂಗಿಕ ಶಿಕ್ಷಣ ಪಡೆಯುವುದರಿಂದ ಹದಿಹರೆಯದ ಗರ್ಭಧಾರಣೆಯ ಕಷ್ಟ ಸವಾಲುಗಳ ಬಗ್ಗೆ ಮಾಹಿತಿ. ಲೈಂಗಿಕ ನಿಂದನೆ ಅಥವಾ ಹಿಂಸೆಯಿಂದ ರಕ್ಷಣೆ ಸಾಧ್ಯತೆ. ಮಕ್ಕಳು ಒಳ್ಳೆಯ ಅಥವಾ ಕೆಟ್ಟ ಸ್ಪರ್ಶದ ನಡುವೆ ವ್ಯತ್ಯಾಸವನ್ನು ಕಲಿಯುವ ಸಾಧ್ಯತೆ. ತಮ್ಮ ದೇಹದ ಮೇಲೆ ಉತ್ತಮ ವೈಜ್ಞಾನಿಕ ತಿಳುವಳಿಕೆ ಮತ್ತು ಸ್ವಾಯತ್ತತೆ ಪಡೆಯಲು ಈ ಶಿಕ್ಷಣ ಅವಶ್ಯಕ ಎಂದು ಶಿಕ್ಷಣ ಇಲಾಖೆ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ ಮತ್ತು ಈ ಎಲ್ಲಾ ಸೂಕ್ತ ಕಾರಣಗಳನ್ನು ನೀಡಿದೆ.