ದೇಶ-ಪ್ರಪಂಚ

ಇಂದು ಬೆಳಗ್ಗೆ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲು, ಕಂಗಾಲಾದ ಜನ

ನ್ಯೂಸ್ ನಾಟೌಟ್ : ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್ ) ಈ ವಿಷಯವನ್ನು ತಿಳಿಸಿದೆ. ಇಂದು ಬೆಳಗ್ಗೆ 6.45ಕ್ಕೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. 5 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಎನ್‌ಸಿಎಸ್ ಮಾಹಿತಿ ನೀಡಿದೆ.

ತಕ್ಷಣಕ್ಕೆ ಯಾವುದೇ ಸಾವು– ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಇತ್ತೀಚೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್‌ಬ್ಲೇರ್‌ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಕಂಪನವು ಭೂಮಿಯ 112 ಕೀ.ಮೀಟರ್ ಆಳದಲ್ಲಿ ಸಂಭವಿಸಿತ್ತು.

Related posts

ಇಂದು ರಕ್ಷಾ ಬಂಧನ: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ದೇಶದ ಜನತೆಗೆ ಶುಭಾಶಯ

ಒಂದೇ ಕುಟುಂಬದ 5 ಕಾರ್ಮಿಕರ ದುರಂತ ಅಂತ್ಯ! ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ನಡೆಯಿತು ಅನಾಹುತ..!

ಮಿಲಿಯನ್‌ ಡಾಲರ್‌ ಲಾಟರಿ ಗೆದ್ದವಳು ವೇದಿಕೆಯಲ್ಲೇ ಕುಸಿದು ಬಿದ್ದದ್ದೇಕೆ..? ಇಲ್ಲಿದೆ ವೈರಲ್ ವಿಡಿಯೋ