Uncategorized

ಬೆಳ್ಳಂಬೆಳಿಗ್ಗೆ ಹತ್ತು ಸೆಕೆಂಡಿಗೂ ಹೆಚ್ಚು ಕಂಪಿಸಿದ ಭೂಮಿ..!

ನ್ಯೂಸ್ ನಾಟೌಟ್: ಶನಿವಾರ ಬೆಳ್ಳಂಬೆಳಿಗ್ಗೆ ಹತ್ತು ಸೆಕೆಂಡಿಗೂ ಹೆಚ್ಚು ಸಮಯ ಭೂಮಿ ಕಂಪಿಸಿದ ಅನುಭವ ವಿಜಯಪುರದ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಗಿದೆ ಎಂದು ವರದಿಯಾಗಿದೆ.

ಬೆಳಗ್ಗೆ 6.22ರಿಂದ 6.23ರ ವೇಳೆಗೆ ಭೂಮಿ 10 ಸೆಕೆಂಡ್ ಗೂ ಅಧಿಕ ಸಮಯ ಕಂಪಿಸಿದೆ. ಜೊತೆಗೆ ಭಾರೀ ಶಬ್ಧ ಭೂಮಿಯೊಳಗಿಂದ ಕೇಳಿಬಂದಿತು. ನಿದ್ರೆಯಿಂದ ಆಗ ತಾನೆ ಎದ್ದವರು, ಏಳದವರು ಭೂಮಿಯ ಕಂಪನ ಮತ್ತು ಭಾರೀ ಶಬ್ಧದಿಂದ ಬೆಚ್ಚಿ ಬಿದ್ದು ಆತಂಕದಿಂದ ಮನೆಯಿಂದ ಓಡಿ ಹೊರಬಂದರು. ಭೂಕಂಪನದ ಕೇಂದ್ರಬಿಂದು ಯಾವುದು ಮತ್ತು ಭೂಕಂಪನದ ತೀವ್ರತೆ ಎಷ್ಟಿತ್ತು ಎಂಬುದು ಇನ್ನು ಖಚಿತವಾಗಿಲ್ಲ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಆಗುತ್ತಿದ್ದು, ಜನರಿಗೆ ಸಾಮಾನ್ಯ ಸಂಗತಿಯಂತಾಗಿದೆ.

Related posts

ತಾಲೂಕು ಪಂಚಾಯತ್ ಸದಸ್ಯನ ಜತೆ ಮಾತಾ ವಚನಶ್ರೀ ಪಲ್ಲಂಗದಾಟ

ಕ್ರಿಕೆಟ್‌ ದಿಗ್ಗಜ ಕನ್ನಡಿಗ ರಾಹುಲ್ ದ್ರಾವಿಡ್‌ ಬಗ್ಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವೀಟ್‌..! ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ ಗೂ ಮೊದಲು ಕೋಚ್‌ ಬಗ್ಗೆ ಕೊಹ್ಲಿ ಹೇಳಿದ್ದೇನು?

ಪಾಕ್‌ನ ಮೊದಲ ಹಿಂದೂ ಮಹಿಳಾ ಡಿಎಸ್‌ಪಿ ಅಧಿಕಾರ ಸ್ವೀಕಾರ