ಕರಾವಳಿ

ಮತ್ತೆ ಭೂಕಂಪ, ಮನೆಯಿಂದ ಹೊರಗೋಡಿದ ಜನತೆ

ನ್ಯೂಸ್ ನಾಟೌಟ್ : ಕೆಲವು ದಿನಗಳಿಂದ ರಾಜ್ಯದ ವಿವಿಧ ಕಡೆ ಭೂಕಂಪದ ಅನುಭವಗಳಾಗುತ್ತಿದೆ. ಇದೀಗ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 2.8ರಷ್ಟು ದಾಖಲಾಗಿದೆ ಎಂದು ತಿಳಿದು ಬಂದಿದೆ.

ರಾತ್ರಿ 9.47ರ ಹೊತ್ತಿಗೆ ಎರಡು ಬಾರಿ ಭೂಕಂಪನದ ಅನುಭವವಾಗಿದೆ. ಸ್ವತಃ ಇದನ್ನು ಗ್ರಾಮಸ್ಥರು ತಿಳಿಸಿದ್ದಾರೆ. ಜನರು ಭಯ ಭೀತರಾಗಿದ್ದಾರೆ. ಇಂತಹ ಭೂಕಂಪನದಿಂದ ಯಾವುದೇ ಅಪಾಯ ಇಲ್ಲ ಎಂದು ಸರಕಾರ ಹೇಳುತ್ತಿದೆಯಾದರೂ ಜನರ ಮನಸ್ಸಿನಲ್ಲಿ ಆತಂಕ ಕಡಿಮೆ ಆಗಿಲ್ಲ. ಇದೇ ಮಾದರಿಯಲ್ಲಿ ಕಳೆದ ಎರಡು ಮೂರು ತಿಂಗಳ ಹಿಂದೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಂಪನದ ಅನುಭವ ಆಗಿತ್ತು.

Related posts

ಉಪ್ಪಿನಂಗಡಿ:ತಡರಾತ್ರಿ ಹೊತ್ತಿ ಉರಿದ ಬೇಕರಿ ಅಂಗಡಿ..! ಬೆಳ್ತಂಗಡಿ ಮತ್ತು ಪುತ್ತೂರಿನಿಂದ ಬಂದ ಅಗ್ನಿಶಾಮಕ ವಾಹನಗಳು..!

ಸಿನಿಮಾ ಚಿತ್ರೀಕರಣದ ವೇಳೆ ಲೈಟ್ ಮ್ಯಾನ್ ಮೃತ್ಯು..! ಯೋಗರಾಜ್ ಭಟ್ ವಿರುದ್ಧ ದೂರು ದಾಖಲು..!

ಮಡಿಕೇರಿ:ಭೀಕರ ಅಪಘಾತ,ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತ್ಯು,ಮತ್ತಿಬ್ಬರಿಗೆ ಗಾಯ:ನಾಪತ್ತೆಯಾಗಿರುವ ಲಾರಿ ಚಾಲಕನ ಬಂಧನಕ್ಕೆ ಕ್ರಮ