ಕ್ರೈಂದೇಶ-ವಿದೇಶ

ಭೂಕಂಪದಿಂದ 4 ಸಾವು, ಸುನಾಮಿಯ ಎಚ್ಚರಿಕೆ ನೀಡಿದ ಅಧಿಕಾರಿಗಳು..! ಇಲ್ಲಿದೆ ವೈರಲ್ ವಿಡಿಯೋಗಳು

202

ನ್ಯೂಸ್ ನಾಟೌಟ್: ತೈವಾನ್‌ನಲ್ಲಿ ಇಂದು(ಎ.3) ಸಂಭವಿಸಿದ ಭಾರಿ ಭೂಕಂಪದಲ್ಲಿ ನಾಲ್ವರು ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ನಡೆದಿದೆ. ಕನಿಷ್ಠ 60 ಮಂದಿ ಗಾಯಗೊಂಡಿದ್ದು, ಜಪಾನ್ ಮತ್ತು ಫಿಲಿಪೈನ್ಸ್‌ನಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಸೋಶಿಯಲ್‌ ಮೀಡಿಯಾಗಳಲ್ಲಿ ಈ ಭೂಕಂಪದ ಹಲವಾರು ವಿಡಿಯೋಗಳು ಹರಿದಾಡುತ್ತಿದ್ದು, ಅದರಲ್ಲಿ ಕಟ್ಟಡಗಳು ಅಲುಗಾಡುತ್ತಿರುವುದು, ಸೇತುವೆಗಳು ತೂಗಾಡುತ್ತಿರುವುದು ಮತ್ತು ಜನ ರಕ್ಷಣೆಗಾಗಿ ಪರದಾಡುತ್ತಿರುವುದನ್ನು ಕಾಣಬಹುದಾಗಿದೆ. ರಿಕ್ಟರ್ ಮಾಪಕದಲ್ಲಿ 7.4ರ ತೀವ್ರತೆಯ ಭೂಕಂಪವು ಪೂರ್ವ ತೈಪೆಯನ್ನು ಅಲುಗಾಡಿಸಿತು. ಇದು 25 ವರ್ಷಗಳಲ್ಲೇ ದ್ವೀಪವನ್ನು ಅಪ್ಪಳಿಸಿರುವ ಪ್ರಬಲ ಭೂಕಂಪವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಂಪನಗಳ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸತ್ತ ನಾಲ್ವರಲ್ಲಿ, ತೈಪೆ ನಗರವನ್ನು ಸುತ್ತುವರೆದಿರುವ ಬೆಟ್ಟಗಳ ದಾರಿಯಲ್ಲಿ ಬೆಳಿಗ್ಗೆ ಪಾದಯಾತ್ರೆಗೆ ಹೊರಟಿದ್ದ ಏಳು ಜನರ ಗುಂಪಿನಲ್ಲಿ ಮೂವರು ಸೇರಿದ್ದಾರೆ. ಭೂಕುಸಿತದ ಪರಿಣಾಮ ಬೃಹತ್ ಬಂಡೆಗಳು ಉರುಳಿ ಅವರು ಸಾವನ್ನಪ್ಪಿದ್ದಾರೆ. ಸತ್ತ ನಾಲ್ಕನೇ ವ್ಯಕ್ತಿ ಟ್ರಕ್ ಚಾಲಕ. ಅವರು ಸುರಂಗದ ಸಮೀಪದಲ್ಲಿದ್ದಾಗ ಅವರ ವಾಹನ ಭೂಕುಸಿತದಿಂದ ಸುರಂಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

See also  ರಾಯಭಾರ ಕಚೇರಿ ನೌಕರನ ಹನಿಟ್ರ್ಯಾಪ್‌..! ಸೇನೆಯ ಗೌಪ್ಯ ಮಾಹಿತಿ ಪಾಕ್‌ಗೆ ರವಾನೆ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget