ನ್ಯೂಸ್ ನಾಟೌಟ್: ಗುರುತಿಸುವಿಕೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಭಾರತೀಯ ಇ-ಪಾಸ್ ಪೋರ್ಟ್ ಅನ್ನು ಪರಿಚಯಿಸಲಾಗಿದ್ದು, ಇದು ಅತ್ಯಾಧುನಿಕ ಇಲೆಕ್ಟ್ರಾನಿಕ್ ಪಾಸ್ ಪೋರ್ಟ್ ತಂತ್ರಜ್ಞಾನವನ್ನು ಸಾಂಪ್ರದಾಯಿಕ ಕಾಗದದ ಪಾಸ್ ಪೋರ್ಟ್‌ಗಳಿಗಿಂತ ವಿಭಿನ್ನವಾಗಿದೆ.
ವಿದೇಶಾಂಗ ಸಚಿವಾಲಯದ ವರದಿಯಂತೆ ಎ.1,2024ರಿಂದ ಚಾಲ್ತಿಗೆ ಬಂದಿರುವ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ (ಪಿಎಸ್‌ಪಿ) ಆವೃತ್ತಿ 2.0ರ ಜೊತೆಯಲ್ಲಿ ಪ್ರಾಯೋಗಿಕವಾಗಿ ಇ-ಪಾಸ್‌ಪೋರ್ಟ್ ಉಪಕ್ರಮವನ್ನೂ ಈಗ ಆರಂಭಿಸಲಾಗಿದೆ.
ಪ್ರಸ್ತುತ ನಾಗ್ಪುರ, ಭುವನೇಶ್ವರ, ಜಮ್ಮು, ಗೋವಾ, ಶಿಮ್ಲಾ, ರಾಯಪುರ, ಅಮೃತಸರ, ಜೈಪುರ, ಚೆನ್ನೈ, ಹೈದರಾಬಾದ್, ಸೂರತ್ ಮತ್ತು ರಾಂಚಿಯಲ್ಲಿಯ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳು ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಲು ಸಜ್ಜಾಗಿವೆ ಎನ್ನಲಾಗಿದೆ. ಈ ಸೌಲಭ್ಯವನ್ನು ಶೀಘ್ರವೇ ಇನ್ನಷ್ಟು ಕಚೇರಿಗಳಿಗೆ ವಿಸ್ತರಿಸಲಾಗುವುದು.
ತಮಿಳುನಾಡಿನಲ್ಲಿ ಮಾ.3,2025ರಿಂದ ಇ-ಪಾಸ್‌ಪೋರ್ಟ್ ಗಳ ವಿತರಣೆ ಆರಂಭಗೊಂಡಿದ್ದು, ಮಾ.22ರ ವೇಳೆಗೆ ಒಟ್ಟು 20,729 ಇ-ಪಾಸ್ ಪೋರ್ಟ್‌ಗಳನ್ನು ವಿತರಿಸಲಾಗಿದೆ.
ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗಳಲ್ಲಿ ಆ್ಯಂಟೆನಾ ಮತ್ತು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಚಿಪ್ ಅನ್ನು ಅಳವಡಿಸಲಾಗಿದೆ. ಮುಂಭಾಗದ ಹೊದಿಕೆಯ ಕೆಳಗೆ ಚಿನ್ನದ ಬಣ್ಣದ ವಿಶಿಷ್ಟ ಚಿಹ್ನೆಯಿಂದಾಗಿ ಇ-ಪಾಸ್ ಪೋರ್ಟ್‌ನ್ನು ಸುಲಭವಾಗಿ ಗುರುತಿಸಬಹುದು.
ಆದರೆ ಈಗಾಗಲೇ ಸಾಮಾನ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು ಅವುಗಳನ್ನು ಇ-ಪಾಸ್‌ಪೋರ್ಟ್‌ಗಳಿಗೆ ಬದಲಿಸುವ ಅಗತ್ಯವಿಲ್ಲ. ಭಾರತ ಸರಕಾರವು ನೀಡಿರುವ ಎಲ್ಲ ಪಾಸ್‌ಪೋರ್ಟ್‌ಗಳು ಅವುಗಳ ಅವಧಿ ಮುಗಿಯುವವರೆಗೆ ಮಾನ್ಯವಾಗಿರುತ್ತವೆ ಎನ್ನಲಾಗಿದೆ.
ಭಾರತ-ಪಾಕ್ ಯುದ್ಧ ನಿಲ್ಲಿಸದಿದ್ದರೆ ಎಲ್ಲಾ ವ್ಯಾಪಾರ ನಿಲ್ಲಿಸುವುದಾಗಿ ಬೆದರಿಸಿದ್ದರಾ ಟ್ರಂಪ್..! ಇಲ್ಲಿದೆ ವಿಡಿಯೋ
ಭಾರತೀಯ ಸೇನೆಯಿಂದ ಹೊಸ ಸೇನಾ ಆಪರೇಷನ್..! ಆಪರೇಷನ್ ಕೆಲ್ಲರ್(Keller)ಗೆ 3 ಉಗ್ರರು ಸಾವು..!