ಕ್ರೈಂವೈರಲ್ ನ್ಯೂಸ್

ಗ್ಯಾಸ್‌ ಸಿಲಿಂಡರ್‌ ಗೆ ಇ ಕೆವೈಸಿ ಕಡ್ಡಾಯವಾ..? ಏನಿದು ವದಂತಿ? ಅಧಿಕಾರಿಗಳು ಹೇಳೋದೇನು?

105

ನ್ಯೂಸ್ ನಾಟೌಟ್ : ಗ್ಯಾಸ್‌ ಸಂಪರ್ಕವುಳ್ಳವರು ಇ ಕೆವೈಸಿ ಮಾಡಿಸಿದರೆ ಜನವರಿ 1 ರಿಂದ ಸಹಾಯಧನ ಸಿಗಲಿದೆ, ಇ ಕೆವೈಸಿ ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ 1,400 ರೂ.ಗಳಿಗೆ ಸಿಲಿಂಡರ್‌ ಪಡೆದುಕೊಳ್ಳಬೇಕಾದೀತು ಎಂದು ಸುಳ್ಳು ಸಂದೇಶ ಮೊಬೈಲ್‌ ಜಾಲತಾಣದಲ್ಲಿ ಕಳೆದೊಂದು ವಾರದಲ್ಲಿ ಸಿಕ್ಕಾಪಟ್ಟೆ ಹರಿದಾಡಿದ್ದು, ಗೊಂದಲಕ್ಕೊಳಗಾದ ಜನರು ಗ್ಯಾಸ್‌ ಏಜೆನ್ಸಿಗಳ ಮುಂದೆ ಸರದಿಯಲ್ಲಿದ್ದಾರೆ ಎನ್ನಲಾಗಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಇತ್ತೀಚೆಗೆ ಎಲ್ಲತೈಲ ಕಂಪನಿಗಳು ಪಿಎಂಯುವೈ (ಪ್ರಧಾನ ಮಂತ್ರಿ ಉಜ್ವಲ ಯೋಜನಾ) ಆದ್ಯತೆಯೊಂದಿಗೆ ಪಹಲ್‌ (ಆಧಾರ್‌ ಒದಗಿಸಿದ) ಫಲಾನುಭವಿಗಳಿಂದ ಬಯೋಮೆಟ್ರಿಕ್‌ ಪಡೆದುಕೊಳ್ಳುವಂತೆ ಸೂಚಿಸಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಅಂತಿಮ ದಿನಾಂಕವಾಗಲಿ, ಸಹಾಯಧನವಾಗಲಿ, ಇ ಕೆವೈಸಿ ಮಾಡಿಸದಿದ್ದರೇನು ಎನ್ನುವ ಯಾವುದೇ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಇಲಾಖೆ ಅಥವಾ ತೈಲ ಕಂಪನಿಗಳು ನೀಡಿಲ್ಲ ಎನ್ನಲಾಗಿದೆ.

ಆದರೆ, ಡಿ.31ರ ಅಂತಿಮ ದಿನ, ಸಹಾಯಧನ ಇಷ್ಟಿದೆ, ಇ ಕೆವೈಸಿ ಮಾಡದಿದ್ದರೆ ವಾಣಿಜ್ಯ ದರದಲ್ಲಿ ಸಿಲಿಂಡರ್‌ ಪಡೆಯಬೇಕಾದೀತೆನ್ನುವ ತಪ್ಪು ಮಾಹಿತಿಯನ್ನು ಕಿಡಿಗೇಡಿಗಳು ರವಾನಿಸಿದ್ದಾರೆ ಎಂದು ಹೇಳಲಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 70,000 ಉಜ್ವಲ ಫಲಾನುಭವಿಗಳಿದ್ದು ಮೊದಲ ಆದ್ಯತೆಯಲ್ಲಿ ಹಾಗೂ ಉಳಿದಂತೆ ಆಧಾರ್‌ ಒದಗಿಸಿದ ಫಲಾನುಭವಿಗಳಿಂದ ಬಯೋಮೆಟ್ರಿಕ್‌ ಪಡೆದುಕೊಳ್ಳಬೇಕು. ಉಳಿದಂತೆ ಹರಿದಾಡುತ್ತಿರುವ ಸಂದೇಶದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಮಂಗಳೂರು ಉಜ್ವಲ ಯೋಜನೆ ನೋಡೆಲ್‌ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

https://www.youtube.com/watch?v=ziPJWCMXkuo
See also  ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳ ನಡುವೆ ಮಾರಾಮಾರಿ..! ಜೈಲಿನೊಳಗಿದ್ದ ಮಾರಾಕಾಸ್ತ್ರ ವಶಕ್ಕೆ..! ಅಷ್ಟಕ್ಕೂ ಅಲ್ಲಿ ನಡೆದದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget