ಕರಾವಳಿಕ್ರೈಂಪುತ್ತೂರುರಾಜಕೀಯ

ಸೌಜನ್ಯ ಪ್ರಕರಣ: ‘ನಮ್ಮ ನಡೆ ನ್ಯಾಯದ ಕಡೆ’ ಪ್ರತಿಭಟನೆಗೆ ಡಿವೈಎಸ್ಪಿ ತಡೆ? ಪುತ್ತೂರಿನಲ್ಲೇ ಪುತ್ತಿಲ ಪರಿವಾರಕ್ಕೆ ಹಿನ್ನಡೆಯಾಯ್ತಾ? ಡಿವೈಎಸ್ಪಿ ನೀಡಿದ ಸೂಚನೆಯೇನು?

ನ್ಯೂಸ್ ನಾಟೌಟ್: ಪುತ್ತೂರು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.14 ರಂದು ಪುತ್ತಿಲ ಪರಿವಾರದಿಂದ ‘ನಮ್ಮ ನಡೆ ನ್ಯಾಯದ ಕಡೆ’ ಎಂಬ ಪ್ರತಿಭಟನೆ ಆಯೋಜಿಸಲಾಗಿತ್ತು, ಆದರೆ ಈಗ ಪುತ್ತಿಲ ಪರಿವಾರಕ್ಕೆ ಹಿನ್ನಡೆಯಗಿದೆಯಾ ಎಂಬ ಪ್ರಶ್ನೆ ಮೂಡಿದೆ, ಕಾರಣ ಈ ಪ್ರತಿಭಟನೆಯ ದಿನ ಪುತ್ತೂರು ಬಂದ್, ರಸ್ತೆ ತಡೆಗೆ ಅವಕಾಶವಿಲ್ಲ ಎಂದ ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಪ್ರತಿಭಟನೆಯ ದಿನ ಪುತ್ತೂರು ಬಂದ್, ರಸ್ತೆ ತಡೆಗೆ ಅವಕಾಶ ನೀಡಬಾರದು ಎಂದು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರಿಂದ ಪುತ್ತೂರು ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಗೆ ಸೂಚನೆ ಬಂದಿದೆ ಎನ್ನಲಾಗಿದೆ.

ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶ ನೀಡಲಾಗುವುದು, ಬಂದ್ ಅಥವಾ ರಸ್ತೆ ತಡೆ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪುತ್ತಿಲ ಪರಿವಾರಕ್ಕೆ ನೋಟಿಸ್ ನೀಡುವಂತೆ ಇನ್ಸ್ ಪೆಕ್ಟರ್ ಗೆ ಸೂಚನೆ ನೀಡಿರುವ ಡಿವೈಎಸ್ಪಿ, ದರ್ಬೆಯಿಂದ ಪುತ್ತೂರು ಬಸ್ ನಿಲ್ದಾಣದ ವರೆಗೆ ನಡೆಯುವ ಕಾಲ್ನಡಿಗೆ ಜಾಥಾ ಶಾಂತಿಯುತವಾಗಿ ನಡೆಯಲು ಅವಕಾಶ ನೀಡುವುದಾಗಿ ಹೇಳಿದೆ.

ಸೌಜನ್ಯ ಪರವಾಗಿ ನಡೆಯಲಿರುವ ಅರುಣ್ ಪುತ್ತಿಲ ನೇತೃತ್ವದಲ್ಲಿ ನಡೆಯುವ ‘ನಮ್ಮ ನಡೆ ನ್ಯಾಯದ ಕಡೆ’ ಎಂಬ ಪ್ರತಿಭಟನೆಗೆ ಹಿನ್ನಡೆಯಾಗಿದೆಯಾ? ಈ ಬಗ್ಗೆ ಪುತ್ತಿಲ ಪರಿವಾರದ ನಿರ್ಧಾರವೇನು ಎಂದು ಇನ್ನಷ್ಟೇ ತಿಳಿಯಬೇಕಿದೆ.

Related posts

ಮಂಗಳೂರು: ಏನಿದು ಹನುಮ ಧ್ವಜ ಅಭಿಯಾನ..? ರಸ್ತೆ, ಮನೆ ಮನೆಯಲ್ಲಿ ಬಾವುಟ ಹಾರಿಸುತ್ತೇವೆ ಎಂದ ಶರಣ್ ಪಂಪವೆಲ್

ಮೂಲ್ಕಿ:ತುಳುವಿನಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ:ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಜನಸಾಗರ

ಟೀಕೆಗಳ ಬೆನ್ನಲ್ಲೇ ಓಡೋಡಿ ಬರ್ತಿದ್ದಾರೆ ಡಿವಿ ಸದಾನಂದ ಗೌಡ ..!