ಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಪಂಚಭೂತಗಳಲ್ಲಿ ಲೀನನಾದ ಕನ್ನಡದ ಪ್ರಚಂಡ ಕುಳ್ಳ..! ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ

249

ನ್ಯೂಸ್ ನಾಟೌಟ್ : ಕನ್ನಡದ ಹಿರಿಯ ನಟ ಪ್ರಚಂಡ ಕುಳ್ಳ ಖ್ಯಾತಿಯ ದ್ವಾರಕೀಶ್ ಅಂತಿಮ ವಿಧಿ ವಿಧಾನವನ್ನು ಅವರ ಹಿರಿಯ ಪುತ್ರ ನೆರವೇರಿಸಿದರು. ಬೆಂಗಳೂರಿನ ಚಾಮರಾಜ ಪೇಟೆಯ ಹಿಂದೂ ರುದ್ರ ಭೂಮಿಯ ಚಿತಾಗಾರದಲ್ಲಿ ಬುಧವಾರ ದ್ವಾರಕೀಶ್ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಅವರ ದೇಹವು ಪಂಚಭೂತಗಳಲ್ಲಿ ಲೀನವಾಯಿತು.

ಸಕಲ ಸರ್ಕಾರಿ ಗೌರವದೊಂದಿಗೆ ದ್ವಾರಕೀಶ್ ಅವರ ಅಂತಿಮ ವಿಧಿ ವಿಧಾನ ನಡೆಯಿತು. ಕನ್ನಡದ ಅನೇಕ ಸಿನಿಮಾಗಳಲ್ಲಿ ದ್ವಾರಕೀಶ್ ನಟನಾಗಿ, ಹಾಸ್ಯನಟನಾಗಿ ಗುರುತಿಸಿಕೊಂಡಿದ್ದರು. ಮಾತ್ರವಲ್ಲ ನಿರ್ಮಾಪಕ, ನಿರ್ದೇಶಕನಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದರಲ್ಲೂ ದಿವಂಗತ ವಿಷ್ಣು ವರ್ಧನ್ ಜೊತೆಗೆ ಅನೇಕ ಸಿನಿಮಾಗಳಲ್ಲಿ ದ್ವಾರಕೀಶ್ ಕಾಣಿಸಿಕೊಂಡಿದ್ದರು. ಕನ್ನಡ ಸಿನಿಮಾ ರಂಗವನ್ನು ಶ್ರೀ ಮಂತಗೊಳಿಸಿರುವ ದಿಗ್ಗಜರ ಸಾಲಿನಲ್ಲಿ ದ್ವಾರಕೀಶ್ ಕೂಡ ಒಬ್ಬರಾಗಿದ್ದಾರೆ. ಅಂತಹ ಮೇರು ಪ್ರತಿಭೆಯನ್ನು ಕಳೆದುಕೊಂಡ ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅನೇಕ ನಟರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಅನೇಕ ಮಂದಿ ಇವರ ಅಂತಿಮ ದರ್ಶನವನ್ನು ಪಡೆದುಕೊಂಡರು.

See also  ಕೃಷಿಹೊಂಡಕ್ಕೆ ಬಿದ್ದು 2 ಪುಟ್ಟ ಬಾಲಕಿಯರು ಸಾವು..! ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ದುರ್ಘಟನೆ.!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget