ಕ್ರೈಂಜೀವನ ಶೈಲಿ/ಆರೋಗ್ಯದೇಶ-ವಿದೇಶಮಹಿಳೆ-ಆರೋಗ್ಯವಿಡಿಯೋವೈರಲ್ ನ್ಯೂಸ್

ಶ್ರೀ ರಾಮನ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು..! ಹೃದಯಾಘಾತದ ಶಂಕೆ..! ಇಲ್ಲಿದೆ ವೈರಲ್ ವಿಡಿಯೋ

186

ನ್ಯೂಸ್ ನಾಟೌಟ್: ರಾಮಲೀಲಾ ಕಾರ್ಯಕ್ರಮದಲ್ಲಿ ಶ್ರೀ ರಾಮನ ಪಾತ್ರ ನಿರ್ವಹಿಸುತ್ತಿದ್ದ ಪಾತ್ರಧಾರಿಯೊಬ್ಬರು ವೇದಿಕೆಯ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ಇಂದು(ಅ.6) ನಡೆದಿದೆ.

ದಿಲ್ಲಿಯ ಶಾದರದಲ್ಲಿನ ಜೈ ಶ್ರೀ ರಾಮ್ ಲೀಲಾ ವಿಶ್ವಕರ್ಮ ನಗರ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು 45 ವರ್ಷದ ಸುಶೀಲ್ ಕೌಶಿಕ್ ಎಂದು ಗುರುತಿಸಲಾಗಿದ್ದು, ಅವರು ಶ್ರೀ ರಾಮನ ಪಾತ್ರ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

ವೈರಲ್ ಆಗಿರುವ ಈ ಘಟನೆಯ ವಿಡಿಯೊದಲ್ಲಿ, ಕೌಶಿಕ್ ತಮ್ಮ ಪಾಲಿನ ಸಾಲುಗಳನ್ನು ಪ್ರಸ್ತುತಪಡಿಸುವಾಗ, ದಿಢೀರನೇ ತಮ್ಮ ಎದೆ ಹಿಡಿದುಕೊಂಡು ವೇದನೆ ಅನುಭವಿಸಿದ್ದಾರೆ. ನಂತರ, ವೇದಿಕೆಯ ಹಿಂಭಾಗಕ್ಕೆ ತೆರಳಿರುವ ಅವರು, ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕೌಶಿಕ್ ಹೃದಯಾಘಾತಕ್ಕೆ ತುತ್ತಾಗಿದ್ದು, ಅವರನ್ನು ಕೂಡಲೇ ಆನಂದ್ ವಿಹಾರ್ ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿ ಅವರು ಮೃತಪಟ್ಟಿರುವುದು ದೃಢವಾಗುತ್ತದೆ.

See also  ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ..! ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ಅನಾಹುತ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget