Latestಕ್ರೈಂದೇಶ-ವಿದೇಶ

ದೇಹದ ದುರ್ನಾತಕ್ಕೆ ವಿಮಾನದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳ..! ಮಧ್ಯ ಪ್ರವೇಶಿಸಿದ ಸಿಬ್ಬಂದಿಗೆ ಕಚ್ಚಿದ ಮಹಿಳೆ..! ವಿಡಿಯೋ ವೈರಲ್

581

ನ್ಯೂಸ್ ನಾಟೌಟ್: ದೇಹದಿಂದ ಬರುವ ದುರ್ನಾತ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆಯುತ್ತಿರುವಾಗ ಸಮಾಧಾನ ಮಾಡಲು ಬಂದ ವಿಮಾನ ಸಿಬ್ಬಂದಿಯನ್ನು ಪ್ರಯಾಣಿಕರೊಬ್ಬರು ಕಚ್ಚಿರುವ ಘಟನೆ ಶೆನ್ಜೆನ್ ಏರ್ ​ಲೈನ್ಸ್ ​ನಲ್ಲಿ ನಡೆದಿದೆ.

ಈ ಕಾರಣದಿಂದಾಗಿಯೇ ವಿಮಾನ ಹಾರಾಟ 2 ಗಂಟೆಗಳ ಕಾಲ ವಿಳಂಬವಾಗಿತ್ತು. ಏಪ್ರಿಲ್ 1 ರಂದು ದಕ್ಷಿಣ ಚೀನಾದ ಶೆನ್ಜೆನ್ ನಿಂದ ಶಾಂಘೈಗೆ ಹೊರಡಲು ನಿಗದಿಯಾಗಿದ್ದ ವಿಮಾನವು ಟೇಕ್ ಆಫ್ ಆಗಲು ಸಿದ್ಧವಾದಾಗ ಸಂಘರ್ಷ ಭುಗಿಲೆದ್ದಿತು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಅಕ್ಕಪಕ್ಕದಲ್ಲಿ ಕುಳಿತಿದ್ದ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಘರ್ಷಣೆ ಆರಂಭವಾಯಿತು.

ಅವರಲ್ಲಿ ಒಬ್ಬರು ಇನ್ನೊಬ್ಬರ ದೇಹದ ವಾಸನೆಯ ಬಗ್ಗೆ ದೂರು ನೀಡಿದರೆ, ಇನ್ನೊಬ್ಬರು ತನ್ನ ಸಹ ಪ್ರಯಾಣಿಕರ ಸೆಂಟ್ ​ನ ಬಲವಾದ ವಾಸನೆಯನ್ನು ವಿರೋಧಿಸಿದರು. ಅವರ ನಡುವಿನ ಮಾತಿನ ಚಕಮಕಿ ಶೀಘ್ರದಲ್ಲೇ ದೈಹಿಕ ಘರ್ಷಣೆಗೆ ಕಾರಣವಾಗಿದೆ. ಇಬ್ಬರು ಮಹಿಳಾ ವಿಮಾನ ಸಿಬ್ಬಂದಿ ಮತ್ತು ಇಬ್ಬರು ಪುರುಷ ಸಹೋದ್ಯೋಗಿಗಳು ಮಧ್ಯಪ್ರವೇಶಿಸಿ ಜಗಳವನ್ನು ತಡೆಯಲು ಪ್ರಯತ್ನಿಸಿದರು.

ಗಲಾಟೆ ನಡೆಯುತ್ತಿದ್ದಾಗ ಸೃಷ್ಟಿಯಾದ ಅವ್ಯವಸ್ಥೆಯನ್ನು ಮೊಬೈಲ್ ​ನಲ್ಲಿ ಸೆರೆ ಹಿಡಿಯಲಾಗಿದೆ. ಪ್ರಯಾಣಿಕರು ಕಚ್ಚಿ ಸಿಬ್ಬಂದಿ ಸಣ್ಣ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಹಾಗೆಯೇ ಘರ್ಷಣೆಯಲ್ಲಿ ಭಾಗಿಯಾದ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಕರೆದೊಯ್ದರು. ಇತರ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಯುವಂತೆ ಹೇಳಲಾಯಿತು. ಬಳಿಕ ಉಳಿದ ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡಲಾಗಿದೆ.

ನಾಯಿಗಳು ಬೊಗಳಿ ಕಿರಿ-ಕಿರಿ ಮಾಡುತ್ತವೆ ಎಂದು ವಿಷ ಹಾಕಿ ಕೊಂದ ವ್ಯಕ್ತಿ..! 25ಕ್ಕೂ ಹೆಚ್ಚು ನಾಯಿಗಳು ಸಾವು..!

150 ವರ್ಷಗಳಷ್ಟು ಹಳೇಯ ಬಾವಿ ಸ್ವಚ್ಛಗೊಳಿಸುವಾಗ ದಿಢೀರ್ ಹೊರ ಬಂದ ವಿಷಾನಿಲ..! 8 ಮಂದಿ ಸಾವು..!

 

See also  ಆಲೆಟ್ಟಿ: ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ಪ್ರಕರಣ, ಹಲವು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ರಿಕ್ಷಾ ಚಾಲಕ ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget