ಕ್ರೈಂವೈರಲ್ ನ್ಯೂಸ್

ನಕಲಿ ಉತ್ಪನ್ನಗಳನ್ನು ಪತ್ತೆ ಹಚ್ಚೋದಕ್ಕೆ ಬಂದಿದೆ ಹೊಸ ಆ್ಯಪ್..! ಮಾರಾಟ ಕಂಪನಿ ಹೇಳಿದ್ದೇನು?

216

ನ್ಯೂಸ್ ನಾಟೌಟ್ : ಆನ್​​ಲೈನ್ ಮಾರುಕಟ್ಟೆಯಂತೂ ಕೆಲವೇ ವರ್ಷಗಳಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದನ್ನೇ ಲಾಭವಾಗಿಟ್ಟುಕೊಂಡು ಕೆಲ ವಂಚಕರು ಆನ್​ಲೈನ್​ ಮತ್ತು ಆಫ್​ಲೈನ್​ ಎರಡರಲ್ಲೂ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ.
ಗ್ರಾಹಕರಿಗೆ ಇದನ್ನು ಪತ್ತೆಹಚ್ಚೋದೆ ಒಂದು ದೊಡ್ಡ ಸವಾಲಾಗಿದೆ. ಅಸಲಿ ಮತ್ತು ನಕಲಿ ಉತ್ಪನ್ನಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಅನೇಕ ಜನರಿಗೆ ಸವಾಲಿನ ಕೆಲಸವಾಗಿದೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇದೀಗ ಟೆಕ್ ಕಂಪನಿಯೊಂದು ಹೊಸ ಅಪ್ಲಿಕೇಶನ್​ ಅನ್ನು ಬಿಡುಗಡೆ ಮಾಡಿದೆ. Alitheon ಎಂಬ ಅಮೇರಿಕನ್ ಕಂಪನಿಯು (FeaturePrint) ಫೀಚರ್ ಪ್ರಿಂಟ್ ಎಂಬ ಸ್ಮಾರ್ಟ್​​ಫೋನ್​ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಡಿವೈಸ್ ಕ್ಯಾಮೆರಾದ ಸಹಾಯದಿಂದ ನಕಲಿ ಉತ್ಪನ್ನಗಳನ್ನು ಕೃತಕ ಬುದ್ಧಿಮತ್ತೆ (AI) ಶಕ್ತಿಯನ್ನು ಬಳಸಿಕೊಂಡು ಗುರುತಿಸುತ್ತದೆ.
ಇನ್ನು ಫೀಚರ್‌ಪ್ರಿಂಟ್ ಅಪ್ಲಿಕೇಶನ್ ವಿಶೇಷ ಸೆನ್ಸಾರ್​​ಗಳು ಉತ್ಪನ್ನಗಳ ಮೇಲೆ ಹೊಲೊಗ್ರಾಮ್‌ಗಳು, ಬಾರ್‌ಕೋಡ್‌ಗಳು ಅಥವಾ ಸ್ಟಿಕ್ಕರ್‌ಗಳನ್ನು ಓದುವ ಅಗತ್ಯವಿಲ್ಲದೆಯೇ AI ತಂತ್ರಜ್ಞಾನದೊಂದಿಗೆ ನಕಲಿ ಉತ್ಪನ್ನಗಳನ್ನು ಪತ್ತೆ ಮಾಡುತ್ತದೆ. ಹಾನಿಗೊಳಗಾದ ಅಥವಾ ಯಾವುದೇ ಭಾಗಗಳನ್ನು ಕಳೆದುಕೊಂಡಿದ್ದರೆ ಸಹ ಇದು ಪತ್ತೆ ಮಾಡುತ್ತದೆ.
ನಕಲಿ ಉತ್ಪನ್ನಗಳ ಸಮಸ್ಯೆಯನ್ನು ಪರಿಹರಿಸಲು ಅಲಿಥಿಯಾನ್ ಈ ಫೀಚರ್‌ಪ್ರಿಂಟ್ ಅಪ್ಲಿಕೇಶನ್​ ಅನ್ನು ಅಭಿವೃದ್ಧಿಪಡಿಸಿದೆ.

ಅದಕ್ಕಾಗಿ ಕಂಪನಿಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ಸೈನ್ ಅಪ್ ಮಾಡಬಹುದು ಮತ್ತು ತಮ್ಮ ಉತ್ಪನ್ನಗಳನ್ನು ಗುರುತಿಸಲು ಮತ್ತು ದೃಢೀಕರಿಸಲು ಅಪ್ಲಿಕೇಶನ್‌ನ ಫೀಚರ್ಸ್​​ಗಳನ್ನು ಬಳಸಬಹುದು ಎಂದಿದೆ.
ಇನ್ನು ಈ ನಕಲಿ ಉತ್ಪನ್ನಗಳ ಮಾರಾಟದಿಂದ ಕಂಪನಿಗಳ ಹಣಕಾಸಿನ ನಷ್ಟದ ಅಪಾಯವನ್ನು ಕಡಿಮೆ ಮಾಡಬಹುದು. ಆದ್ದರಿಂದ ಬಳಕೆದಾರರು ಯಾವುದೇ ಉತ್ಪನ್ನ ಖರೀದಿಸುವಾಗ ಒರಿಜಿನಲ್ ಯಾವುದು, ನಕಲಿ ಯಾವುದು ಎಂಬುದನ್ನು ತಿಳಿಯಬಹುದಾಗಿದೆ. ಈ ಆ್ಯಪ್​ ಮೂಲಕ ಚಿನ್ನ ಅಥವಾ ಪುರಾತನ ಕೈಗಡಿಯಾರಗಳಂತಹ ಯಾವುದೇ ಉತ್ಪನ್ನವನ್ನು ಪತ್ತೆಹಚ್ಚಬಹುದು ಎಂದು ಕಂಪನಿ ತಿಳಿಸಿದೆ.

See also  ಚಂದ್ರಯಾನ-3: ಶಿವಶಕ್ತಿ ವಿವಾದದ ಬಳಿಕ ಏನಿದು ಮತ್ತೊಂದು ವಿವಾದ? ಚಂದ್ರನನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ಎಂದ ಸ್ವಾಮೀಜಿ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget