ಕರಾವಳಿಕಾಸರಗೋಡುಕ್ರೈಂದಕ್ಷಿಣ ಕನ್ನಡಮಂಗಳೂರು

ಬಂಟ್ವಾಳದಲ್ಲಿ ನಕಲಿ ಕರೆನ್ಸಿ ನೋಟು ಪತ್ತೆ..! ಕಾಸರಗೋಡಿನ ಇಬ್ಬರ ಬಂಧನ..!

230

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಯ ಕೇರಳ ರಾಜ್ಯದಿಂದ ಖೋಟಾ ನೋಟು ತಂದು ಚಲಾವಣೆ ಮಾಡುತ್ತಿರುವ ಜಾಲವೊಂದನ್ನು ಪತ್ತೆಹಚ್ಚಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಸಿ.ರೋಡ್ ಎಂಬಲ್ಲಿ ಕಾಸರಗೋಡು ಮೂಲದ ಮಹಿಳೆ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಬಿ.ಸಿ.ರೋಡ್ ನ ಖಾಸಗಿ ಆಸ್ಪತ್ರೆಯೊಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವಾಹನವೊಂದನ್ನು ತಪಾಸಣೆ ಮಾಡಿದಾಗ ಅಲ್ಲಿದ್ದವರು ಪರಾರಿಯಾಗಲು ಯತ್ನಿಸಿದ್ದು, ಅವರ ಪೈಕಿ ಓರ್ವ ತಪ್ಪಿಸಿಕೊಂಡಿದ್ದಾನೆ. ಇದೀಗ ಇಬ್ಬರ ವಿಚಾರಣೆ ನಡೆಯುತ್ತಿದೆ.

ಸೆರೆ ಸಿಕ್ಕವರನ್ನು ವಿಚಾರಿಸಲಾಗಿ ಆತನು ಕಾಸರಗೋಡಿನ ಕೂಡ್ಲು ಗ್ರಾಮದ ಮೊಹಮ್ಮದ್ ಸಿ.ಎ. (61), ಕಾರಿನಲ್ಲಿದ್ದ ಮಹಿಳೆ‌ ಕಾಸರಗೋಡು ಕೂಡ್ಲು ಗ್ರಾಮದ ಕಮರುನ್ನೀಸಾ (41) ಎಂದು ತಿಳಿದುಬಂದಿದೆ. ಓಡಿ ಪರಾರಿಯಾದ ವ್ಯಕ್ತಿ ಶೆರೀಫ್ ಎಂಬುದಾಗಿ ತಿಳಿದುಬಂದಿರುತ್ತದೆ. ಓರ್ವ ಪರಾರಿಯಾಗಿದ್ದಾನೆ. ಇವರ ವಿಚಾರಣೆ ನಡೆಯುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾದ ಬೃಹತ್ ಜಾಲಕ್ಕೂ ಇವರಿಗೂ ಏನಾದರೂ ಲಿಂಕ್ ಇದೆಯೇ ಎಂಬುದರ ಕುರಿತು ವಿಚಾರಣೆ ನಡೆಯುತ್ತಿದೆ.ಇದೀಗ ಕಾಸರಗೋಡಿನ ಮೊಹಮ್ಮದ್ ಸಿ.ಎ (61) ಮತ್ತು ಕಮರುನ್ನೀಸಾ (41) ಎಂಬಿಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಶೆರೀಫ್ ಗೆ ಹುಡುಕಾಟ ನಡೆಯುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ತಿಳಿಸಿದ್ದಾರೆ. ಇವರಿಂದ 500 ರೂ ಮುಖಬೆಲೆಯ 46 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಎಲ್ಲಿಂದ ತರಲಾಗಿತ್ತು. ಕೊಟ್ಟವರು ಯಾರು, ಎಲ್ಲೆಲ್ಲಿ ವಹಿವಾಟು ನಡೆಸಿದ್ದಾರೆ.

ಎಷ್ಟು ದಿನದ ಹಿಂದೆ ಇದೆ ನಡೆದಿದೆ. ಇದರ ಹಿಂದೆ ಯಾರಾದರೂ ಇದ್ದಾರೆಯೇ ಎನ್ನುವುದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ವೇಳೆ ಆರೋಪಿಗಳು ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿದ್ದು, ತಮ್ಮ ಸ್ವಾಧೀನದಲ್ಲಿದ್ದ 500 ರೂಪಾಯಿ ಮುಖ ಬೆಲೆಯ 46 ಖೋಟಾ ನೋಟುಗಳನ್ನು ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ. ಸದ್ಯ ನೋಟುಗಳನ್ನು ವಶಕ್ಕೆ ಪಡೆದಿದ್ದು, ಬಳಿಕ ಆರೋಪಿಗಳನ್ನು ಹಾಗೂ ಅವರ ಬಳಿಯಿದ್ದ ರೂ 5,300 ನಗದು ಹಣ ಮತ್ತು 3 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

See also  ಧರ್ಮಸ್ಥಳದಿಂದ ಸೌತಡ್ಕ ಗಣಪತಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ, ಹಲವರಿಗೆ ಗಾಯ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget