ಕ್ರೀಡೆ/ಸಿನಿಮಾಕ್ರೈಂವಿಡಿಯೋವೈರಲ್ ನ್ಯೂಸ್

ಕುಡಿದ ಮತ್ತಿನಲ್ಲಿ ರಸ್ತೆ ಮೇಲೆ ತೂರಾಡಿದ್ರಾ ಈ ಬಾಲಿವುಡ್‌ ನಟ..? ಏನಿದು ಘಟನೆ..? ಇಲ್ಲಿದೆ ವೈರಲ್ ವಿಡಿಯೋ

262

ನ್ಯೂಸ್ ನಾಟೌಟ್ : ನಡುರಾತ್ತಿ ದೆಹಲಿ ರಸ್ತೆಯಲ್ಲಿ ಬಾಲಿವುಡ್‌ ಖ್ಯಾತ ನಟ ಸನ್ನಿ ಡಿಯೋಲ್‌ ತೂರಾಡುತ್ತ ಒಂಟಿಯಾಗಿ ತಿರುಗುತ್ತಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಡಿಯೋಲ್‌ ಮದ್ಯಪಾನ ಮಾಡಿದ್ರಾ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲವಾದರೂ, ತೂರಾಡುತ್ತಿರುವ ದೃಶ್ಯ ನೋಡಿದ್ರೆ ಮದ್ಯ ಸೇವನೆ ಮಾಡಿದಂತಿದೆ.
ಹೌದು.. ಸನ್ನಿ ಡಿಯೋಲ್ ಇತ್ತೀಚೆಗೆ ‘ಗದರ್ 2’ ಬ್ಲಾಕ್‌ಬಸ್ಟರ್ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಮಿಂಚಿದರು. ಗದರ್‌ 2 ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಮಧ್ಯರಾತ್ರಿ ಮುಂಬೈನ ಬೀದಿಗಳಲ್ಲಿ ಸನ್ನಿ ತೂರಾಡುತ್ತ ತಿರುಗುತ್ತಿರುವುದನ್ನು ಕಂಡುಬಂದಿದೆ.

ವೈರಲ್‌ ವಿಡಿಯೋದಲ್ಲಿ ಸನ್ನಿ ಪ್ರಜ್ಞೆಇಲ್ಲದವರಂತೆ ನಡುರಸ್ತೆಯಲ್ಲಿ ತೂರಾಡುತ್ತಿರುವುದನ್ನು ಕಂಡಿದೆ. ಆಗ ಸ್ಥಳಕ್ಕೆ ಬರುವ ಆಟೋರಿಕ್ಷಾ ಚಾಲಕನ ಅವರನ್ನು ಆಟೋದಲ್ಲಿ ಕೈಹಿಡಿದು ಕೂರಿಸಿ ಕರೆದುಕೊಂಡು ಹೋಗುವ ದೃಶ್ಯ ವಿಡಿಯೋದಲ್ಲಿದೆ. ಈ ವೀಡಿಯೋ ವೈರಲ್ ಆದ ಬೆನ್ನಲ್ಲೆ ನಟ ಕುಡಿದಿದ್ದ ಎಂಬ ಊಹಾಪೋಹಗಳು ಹುಟ್ಟಿಕೊಂಡಿವೆ ಎನ್ನಲಾಗಿದೆ.

ಕೆಲವರು ಕಾಮೆಂಟ್ ನಲ್ಲಿ ಇದು ಸಫರ್‌ ಚಿತ್ರದ ಚಿತ್ರೀಕರಣದ ದೃಶ್ಯವಾಗಿದೆ ಎಂದಿದ್ದಾರೆ.

See also  ಭಾರತೀಯ ಹೈಕಮಿಷನ್‌ ಸಿಬ್ಬಂದಿಯನ್ನು 24 ಗಂಟೆಯೊಳಗೆ ದೇಶ ತೊರೆಯುವಂತೆ ಸೂಚಿಸಿದ ಪಾಕ್..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget