ಕ್ರೈಂವೈರಲ್ ನ್ಯೂಸ್

ಮೂಗ-ಕಿವುಡ ಮಹಿಳೆಯನ್ನು ಬಾತ್ ರೂಮ್ ನಲ್ಲಿ ಕಟ್ಟಿ ಹಾಕಿ ಯುವಕನಿಂದ ಬಲತ್ಕಾರ..! ಪತ್ನಿಯನ್ನು ಕಂಡು ಕಣ್ಣೀರಿಟ್ಟ ಮೂಗ ಪತಿ..! ಏನಿದು ಕರುಣಾಜನಕ ಕಥೆ

ನ್ಯೂಸ್ ನಾಟೌಟ್ : ಹುಟ್ಟು ಮೂಕ ಹಾಗೂ ಕಿವುಡ ಮಹಿಳೆಯ ಮೇಲೆ ಯುವಕನೊಬ್ಬ ಬಲತ್ಕಾರ ಮಾಡಿರುವ ಭಯಾನಕ ಘಟನೆ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಾಯಿ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ವಿಜಯನಗರ ಕಾಲೋನಿಯ ಮಹಿಳೆ ಹುಟ್ಟಿನಿಂದಲೇ ಕಿವುಡ ಮತ್ತು ಮೂಕಳಾಗಿದ್ದಳು.

ಆಕೆಯ ಪತಿಯೂ ಮೂಕನಾಗಿದ್ದು ಇಬ್ಬರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಆರೋಪಿಯು ಈ ಮಹಿಳೆಯನ್ನು ದಿಟ್ಟಿಸಿ ನೋಡುತ್ತಿದ್ದು, ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾಯಿ ಎಂಬಾತ ಮಹಿಳೆ ಮನೆಗೆ ನುಗ್ಗಿದ್ದು, ಬಳಿಕ ಆಕೆಯನ್ನು ಬಾತ್ ರೂಂನಲ್ಲಿ ಕಟ್ಟಿ ಹಾಕಿ ಬಲತ್ಕಾರ ಮಾಡಿದ್ದಾನೆ ಎನ್ನಲಾಗಿದೆ.

ಸಂತ್ರಸ್ತೆ ಮೂಕಳಾಗಿದ್ದರಿಂದ ಅವಳಿಗೆ ಕಿರುಚಲು ಸಹ ಸಾಧ್ಯವಾಗಿರಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಯುವಕ ಮೃಗನಂತೆ ಆಕೆಯ ಮೇಲೆ ಹ* ಲ್ಲೆ ನಡೆಸಿದ್ದಾನೆ. ಬಲತ್ಕಾರ ಮಾಡಿದ ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟಿದ್ದ ಎನ್ನಲಾಗಿದೆ. ಸ್ವಲ್ಪ ಹೊತ್ತಿನ ನಂತರ ಪತಿ ಮನೆಗೆ ಬಂದು ಬಾತ್ ರೂಂ ಬಾಗಿಲು ತೆರೆದಾಗ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಆತ ಆಕೆಗೆ ಉಪಚರಿಸಿದ್ದಾನೆ.

ಬಳಿಕ ಆಕೆ ಸನ್ನೆಯ ಮುಖಾಂತರ ಪತಿಗೆ ವಿಷಯ ತಿಳಿಸಿದ್ದು, ಕೂಡಲೇ ಇಬ್ಬರು ಸೇರಿಕೊಂಡು ಹುಮಾಯೂನ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Related posts

ಮುಖ್ಯಮಂತ್ರಿ ರಾಜೀನಾಮೆ..! ಬಿಜೆಪಿ ಜೊತೆ ಹೊಸ ಸರ್ಕಾರ..?

ಸ್ಕೂಟರ್ ಅನ್ನು ಬೆನ್ನಟ್ಟಿದ ಬೀದಿ ನಾಯಿಗಳು! ಕಾರಿಗೆ ಡಿಕ್ಕಿ ಹೊಡೆದ ಸ್ಕೂಟರ್! ಇಲ್ಲಿದೆ ವೈರಲ್ ವಿಡಿಯೋ

ಮಾರ್ಪಾಡಿ: ಮುಂಬೈನಲ್ಲಿರುವ ನಿಗೂಢ ವ್ಯಕ್ತಿಯೊಂದಿಗೆ ಕ್ರಿಕೆಟ್ ಬೆಟ್ಟಿಂಗ್ , ಮೂವರು ಪೊಲೀಸ್ ವಶಕ್ಕೆ