ಸುಳ್ಯ

ಸುಳ್ಯದ ಹಲವು ಕಡೆಗಳಲ್ಲಿ ನಕಲಿ ನೋಟುಗಳ ಹಾವಳಿ..!200 ರೂ. ನಕಲಿ‌ ನೋಟುಗಳು ನಿಮ್ಮ ಕೈಗೂ ಬಂದಿರಬಹುದು, ಎಚ್ಚರ..!

32
Spread the love

ನ್ಯೂಸ್‌ ನಾಟೌಟ್‌: ನಕಲಿ ಕರೆನ್ಸಿ ನೋಟುಗಳ (Fake Currency Note) ಹಾವಳಿ ಹೆಚ್ಚಾಗುತ್ತಿದೆ.ಅಸಲಿ ನೋಟುಗಳ ಜೊತೆಗೆ ಆಗಾಗ ನಕಲಿ ನೋಟುಗಳು ಬರುತ್ತಿರುವುದರ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಿರುವುದರ ಬಗ್ಗೆ ನೀವೆಲ್ಲಾ ಕೇಳಿರಬಹುದು.ಇದೀಗ ಸುಳ್ಯದ ಹಲವು ಕಡೆಗಳಲ್ಲಿ ಕಳ್ಳ ನೋಟಿನ ಚಲಾವಣೆಯಾಗಿರೋದರ ಬಗ್ಗೆ ವರದಿಯಾಗಿದೆ.

ನಕಲಿ ನೋಟುಗಳ ಹಾವಳಿಗೆ ವ್ಯಾಪಾರಿಗಳು ತಲೆಕೆಡಿಸಿಕೊಂಡಿದ್ದು, 200 ರೂಪಾಯಿ ಮುಖಬೆಲೆಯ ಕಳ್ಳ ನೋಟುಗಳ ಚಲಾವಣೆ ಕಂಡುಬಂದಿದೆ ಎನ್ನಲಾಗಿದೆ.ಗ್ರಾಹಕರು ಹಣ ಪಾವತಿಸಲು ಹೋದಾಗ ಅಂಗಡಿ ಮಾಲೀಕರೊಬ್ಬರು ನೋಟುಗಳನ್ನು ಮೆಷಿನ್‌ಗೆ ಹಾಕಿದಾಗ ನಕಲಿ ನೋಟುಗಳು ಪತ್ತೆಯಾಗಿವೆ.200 ರೂಪಾಯಿ ನೋಟುಗಳ ಕಲರ್ ಝೆರಾಕ್ಸ್ ದಂಧೆ ನಡೆಯುತ್ತಿರುವ ಅನುಮಾನ ಕೂಡ ವ್ಯಕ್ತವಾಗಿದ್ದು,‌ ನಕಲಿ ನೋಟುಗಳನ್ನ ಕಲರ್ ಝೆರಾಕ್ಸ್ ಮೂಲಕ ತಯಾರಿಸಿ ಅಡ್ಡದಾರಿಯಲ್ಲಿ ಸಣ್ಣ ಪ್ರಮಾಣದಲ್ಲೇ ಚಲಾವಣೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.

ನಕಲಿ ನೋಟುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅದರ ಅಸಲಿಯತ್ತು ಬಯಲಾಗುತ್ತದೆ. ಆದರೆ ಅವಸರಲ್ಲಿ ಹಣ ಪಡೆಯುವಾಗ ಅಸಲಿ ಜೊತೆ ನಕಲಿ ನೋಟು ಇರುವುದು ಗೊತ್ತಾಗುವುದಿಲ್ಲ. ವ್ಯಾಪಾರಿಗಳ ಕೈಗೆ ಸುಲಭವಾಗಿ ನಕಲಿ ನೋಟು ಸೇರುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.ಒಂದನೆಯದಾಗಿ ೨೦೦ ರೂ.ನೋಟಿನ ಖಾಲಿ ಇರುವ ಜಾಗದಲ್ಲಿ ಗಾಂಧೀಜಿಯವರ ಭಾವ ಚಿತ್ರ ಕಾಣಿಸುತ್ತೆ.ಆದರೆ ನಕಲಿ ನೋಟಿನಲ್ಲಿ ಗಾಂಧೀಜಿಯವರ ಭಾವ ಚಿತ್ರ ಕಾಣಿಸೋದಿಲ್ಲ.ಎರಡನೆಯದಾಗಿ ೨೦೦ ರೂ.ನೋಟಿನ ಮಧ್ಯಭಾಗದಲ್ಲಿರುವ ಲೋಹದ ಗೆರೆಯನ್ನು ಅಷ್ಟು ಸುಲಭವಾಗಿ ಕೀಳಲು ಅಸಾಧ್ಯ.ಆದರೆ ನಕಲಿ ನೋಟಿನಲ್ಲಿ ಲೋಹದ ದಾರವನ್ನು ಸುಲಭವಾಗಿ ಕೀಳಬಹುದಾಗಿದೆ. ಇವಿಷ್ಟು ಮಾತ್ರವಲ್ಲದೇ 500 ರೂ. ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿರೋದ್ರ ಬಗ್ಗೆಯೂ ವರದಿಯಾಗಿದೆ.ಹೀಗಾಗಿ ಸಾರ್ವಜನಿಕರು, ಸಣ್ಣ ವ್ಯಾಪಾರಿಗಳು,ಮಾಲೀಕರು ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

See also  ಸುಳ್ಯ :ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನ,ವರ್ಷಾವಧಿ ಜಾತ್ರೋತ್ಸವ ಸಂಭ್ರಮ..;3 ದಿನಗಳ ಕಾಲ ನಡೆಯಲಿರುವ ಅದ್ದೂರಿ ಜಾತ್ರೋತ್ಸವ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ ಓದಿ..
  Ad Widget   Ad Widget   Ad Widget   Ad Widget