ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ಬುಧವಾರವೂ (ಜು.26) ರಜೆ

ನ್ಯೂಸ್ ನಾಟೌಟ್‌: ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಜು.26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಧಾರಾಕಾರ ಮಳೆಯಿಂದ ಸೋಮವಾರ ಮತ್ತು ಮಂಗಳವಾರ (ಜು. 24 ಮತ್ತು 25ರಂದು) ರಜೆ ಘೋಷಿಸಲಾಗಿತ್ತು. ಇದೀಗ ಕರಾವಳಿಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ ಮೂರನೇ ದಿನವೂ ರಜೆ ನೀಡಿದಂತಾಗುತ್ತದೆ.

Related posts

ನೆಲ್ಯಾಡಿ: ವಾಟ್ಸಾಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ,ತಂದೆ-ತಾಯಿ ಸಹಿತ ಮೂರು ವರ್ಷಗಳ ಹಿಂದೆ ತಮ್ಮನನ್ನೂ ಕಳೆದುಕೊಂಡಿದ್ದ ಯುವಕ

ನಾಳೆಯಿಂದ ರೂ. 2,000 ನೋಟು ಬದಲಾವಣೆಗೆ ಅವಕಾಶ, ನಿಮ್ಮಲ್ಲಿ ನೋಟು ಇದ್ದರೆ ಬ್ಯಾಂಕಿಗೆ ಹೋಗಿ ಹೀಗೆ ಮಾಡಿ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ನಾಳೆ (ಜು.20) ಕೂಡ ಶಾಲಾ- ಕಾಲೇಜಿಗೆ ರಜೆ