ಕರಾವಳಿಕ್ರೈಂವೈರಲ್ ನ್ಯೂಸ್

ಸಂತೋಷನ ಅತ್ತಿಗೆಯ ಜೊತೆ ರಂಜಾನ್ ಮೆಹಬೂಬ್ ನ ಅಕ್ರಮ ಸಂಬಂಧ..! ದುಬೈನಲ್ಲಿದ್ದ ಆಕೆಯ ಗಂಡ, ಚಾಕುವಿನಿಂದ ಇರಿದು ಕೊಂದ ಯುವಕರು..!

37
Pc cr: TV 9 kannada
Spread the love

ನ್ಯೂಸ್ ನಾಟೌಟ್ : ಅಕ್ರಮ ಸಂಬಂಧದಿಂದ ರಂಜಾನ್ ಮೆಹಬೂಬ್ ತಾರಾ ವ್ಯಕ್ತಿಯ ಭೀಕರ ಹತ್ಯೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ ತೀರದ ಗ್ರಾಮದ ಮಣ್ಣೂರಿನಲ್ಲಿ ನಡೆದಿದೆ. ಕೇವಲ 24 ವರ್ಷದ ಯುವಕ ಮನೆಗೆ ಒಬ್ಬನೇ ಮಗನಾಗಿದ್ದ, ಅದೇ ಗ್ರಾಮದ ವಿವಾಹಿತ ಮಹಿಳೆಯೊಬ್ಬಳ ಜೊತೆ ಈ ರಂಜಾನ್ ಮೆಹಬೂಬ್ ಅನೈತಿಕ ಸಂಬಂಧ ಹೊಂದ್ದಿದ್ದ ಎನ್ನಲಾಗಿದೆ.

ಆಕೆ ಗಂಡ ದುಬೈನಲ್ಲಿ ಇರುವುದರಿಂದ ಈ ರಂಜಾನ್ ಜೊತೆ ಕದ್ದು ಮುಚ್ಚಿ ಇಬ್ಬರು ಸೇರುತ್ತಿದ್ದರಂತೆ. ಇದನ್ನ ನೋಡಿದ್ದ ಮಹಿಳೆ ಕುಟುಂಬಸ್ಥರು ಹತ್ತಾರು ಭಾರಿ ಕರೆದು ರಾಜಿ ಪಂಚಾಯಿತಿ ಮಾಡಿದ್ದಾರೆ. ಈತ ಮಾತ್ರ ಕ್ಯಾರೆ ಎನ್ನದೇ ತನ್ನ ಚಟ ಮುಂದುವರೆಸಿದ್ದರಿಂದ ಆತನನ್ನು ಮುಗಿಸಲು ಆಕೆಯ ಕುಟುಂಬಸ್ಥರು ಪ್ಲಾನ್ ಮಾಡಿದ್ದರು ಎಂದು ವರದಿ ತಿಳಿಸಿದೆ. ನಿನ್ನೆ(ಮೇ.11) ಸಂಜೆ ಆತ ಬೈಕ್ ಮೇಲೆ ಹೊಲಕ್ಕೆ ಹೋಗಿದ್ದನ್ನ ನೋಡಿದ್ದ ಹಂತಕರು, ಆತ ಒಬ್ಬನೇ ವಾಪಸ್ ಬರುತ್ತಿದ್ದಂತೆ ಅಟ್ಯಾಕ್ ಮಾಡಿ, ಗ್ರಾಮದ ಹೊರವಲಯದಲ್ಲಿ ಮನಬಂದಂತೆ ಚಾಕುವಿನಿಂದ ಇರಿದು ಕೊಂದಿದ್ದಾರೆ.

ಇನ್ನು ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ತಂದೆ ಓಡೋಡಿ ಬಂದಿದ್ದಾರೆ. ಪೊಲೀಸರು ಸ್ಥಳಕ್ಕೆ ದಾವಿಸಿದ್ದು, ಪೊಲೀಸರ ಮತ್ತೊಂದು ತಂಡ ಕೊಲೆಗಾರರನ್ನು ವಶಕ್ಕೆ ಪಡೆದಿತ್ತು. ಸದ್ಯ ಅಫಜಲಪುರ ಪೊಲೀಸರು ಸಂತೋಷ್, ರಾಕೇಶ್, ಆಕಾಶ್, ಪ್ರದೀಪ್ ಎನ್ನುವ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಆರೋಪಿ ಸಂತೋಷನ ಅತ್ತಿಗೆಯ ಜೊತೆ ಈ ರಂಜಾನ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

Click 👇

https://newsnotout.com/2024/05/uppinangady-theft-police
https://newsnotout.com/2024/05/muslim-hindu-muslim-issue-at-bidar
https://newsnotout.com/2024/05/mother-and-baby-in-forest-kannada-news
See also  ಉಳ್ಳಾಲ: ಮೆಹಂದಿ ಶಾಸ್ತ್ರದ ದಿನವೇ ನಾಪತ್ತೆಯಾಗಿದ್ದ ಮದುಮಗ ಬಳ್ಳಾರಿಯಲ್ಲಿ ಪತ್ತೆ! ತಂಗಿಗೆ ಕಳುಹಿಸಿದ ಸಂದೇಶದಲ್ಲಿ ಏನಿತ್ತು …?
  Ad Widget   Ad Widget   Ad Widget