ಜೀವನ ಶೈಲಿ/ಆರೋಗ್ಯದೇಶ-ವಿದೇಶಮಹಿಳೆ-ಆರೋಗ್ಯರಾಜ್ಯವೈರಲ್ ನ್ಯೂಸ್

70 ವರ್ಷ ದಾಟಿದ ಪ್ರಜೆಗಳಿಗೆ ಉಚಿತ ಚಿಕಿತ್ಸೆ: ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶದಲ್ಲಿ ಹೆಚ್ಚುವರಿ 25,000 ಜನೌಷಧಿ ಕೇಂದ್ರಗಳ ಸ್ಥಾಪನೆ

ನ್ಯೂಸ್ ನಾಟೌಟ್ : 70 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ(ಜೂ.28) ಹೇಳಿದ್ದಾರೆ.

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ‘ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಅದರನ್ವಯ 70 ವರ್ಷ ಕ್ಕಿಂತ ಮೇಲ್ಪಟ್ಟ ಎಲ್ಲಾ ವೃದ್ಧರು ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆಯ ಪ್ರಯೋಜನ ಪಡೆಯುತ್ತಾರೆ’ ಎಂದರು. ಈಗಾಗಲೇ ಆಯುಷ್ಮಾನ್ ಭಾರತ್‌- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿ 55 ಕೋಟಿ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.

ದೇಶದಲ್ಲಿ 25,000 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಕೆಲಸವೂ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದರು. ಆಯುಷ್ಮಾನ್ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆ ಆಗಿದೆ. 12 ಕೋಟಿ ಕುಟುಂಬಗಳಿಗೆ ಪ್ರತಿ ವರ್ಷಕ್ಕೆ ತಲಾ 5 ಲಕ್ಷರೂ. ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.

Related posts

ಅಮೆಜಾನ್ ಕಾಡಿನಲ್ಲಿ ನಿಗೂಢ ನಗರ ಪತ್ತೆ..! 3,000 ವರ್ಷ ಹಳೇಯ ವೈಭವಯುತ ಪಟ್ಟಣದಲ್ಲೇನಿದೆ?

ಸುತ್ತೂರು ಮಠಕ್ಕೆ ರೋಬೋ ಆನೆ..! ಈ ಗಜರಾಜನ ವಿಶೇಷತೆಗಳೇನು..?

ಜೂನ್ 14ಕ್ಕೆ ‘ಮಹಾ’ ರಕ್ತದಾನಿಗಳನ್ನು ಗುರುತಿಸುವ ಕಾರ್ಯಕ್ರಮ, 15ಕ್ಕಿಂತ ಹೆಚ್ಚು ಸಲ ರಕ್ತ ದಾನ ಮಾಡಿದ್ದರೆ ನಿಮಗೂ ಸಿಗಲಿದೆ ಅವಕಾಶ, ಏನಿದು ವಿಚಾರ..? ಇಲ್ಲಿದೆ ಡಿಟೇಲ್ಸ್