ದೇಶ-ವಿದೇಶವೈರಲ್ ನ್ಯೂಸ್

ಕಂಠಪೂರ್ತಿ ಕುಡಿದು ದಿನಾ ತರಗತಿಯಲ್ಲಿ ಮಲಗುವ ಶಿಕ್ಷಕ..! ಇದಕ್ಕೆ ವಿದ್ಯಾರ್ಥಿಗಳು ಮಾಡಿದ್ದೇನು..? ಇಲ್ಲಿದೆ ವೈರಲ್ ವಿಡಿಯೋ

234

ನ್ಯೂಸ್ ನಾಟೌಟ್: ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕಾದ ಶಿಕ್ಷಕನೇ ದಿನಾ ಶಾಲೆಗೆ ಕುಡಿದು ಬಂದು ಪಾಠ ಮಾಡದೇ ಕೊಠಡಿಯಲ್ಲಿ ಮಲಗುತ್ತಿರುವ ಘಟನೆ ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ನಡೆದಿದೆ.

ಶಿಕ್ಷಕನ ಕಾರ್ಯಕ್ಕೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಅದೇ ಶಾಲೆಯ ವಿದ್ಯಾರ್ಥಿಗಳು ಕುಡುಕ ಶಿಕ್ಷಕನಿಗೆ ಸರಿಯಾದ ಪಾಠ ಕಳಿಸಿದ್ದಾರೆ. ಶಾಲೆಯ ಶಿಕ್ಷರೊಬ್ಬರು ದಿನಾ ಕುಡಿದು ಶಾಲೆಗೆ ಬರುತ್ತಿದ್ದರು ಇದರಿಂದ ರೋಸಿಹೋದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಎಲ್ಲರೂ ಜೊತೆಯಾಗಿ ಚಪ್ಪಲಿ, ಕಲ್ಲುಗಳಿಂದ ಹೊಡೆದು ಓಡಿಸಿದ್ದಾರೆ.

ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಶಿಕ್ಷಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಇದರ ಕೆಲವರು ಏನೇ ಆದರೂ ಶಿಕ್ಷಕರಿಗೆ ವಿದ್ಯಾರ್ಥಿಗಳ ಕೈಯಿಂದ ಹಾಗೆ ಮಾಡಬಾರದಿತ್ತು, ಶಿಕ್ಷಕರು ಯಾವತ್ತಿದ್ದರೂ ಶಿಕ್ಷಕರೇ ಹಾಗಾಗಿ ಮಕ್ಕಳ ಕೈಯಿಂದ ಈ ರೀತಿ ಚಪ್ಪಲಿ ಎಸೆದಿರುವುದು ತಪ್ಪು ಬದಲಾಗಿ ವಿದ್ಯಾರ್ಥಿಗಳ ಪೋಷಕರು ಬಂದು ಈ ವಿಚಾರದಲ್ಲಿ ಮಾತುಕತೆ ನಡೆಸಬಹುದಿತ್ತು ಅಲ್ಲದೆ ಶಿಕ್ಷಕನ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು ಎಂದು ಹೇಳಿದ್ದಾರೆ.

See also  ಚಿಕನ್‌ ಪೀಸ್‌ ಇಲ್ಲದ ಬಿರಿಯಾನಿ ಕೊಟ್ಟ ಹೋಟೆಲ್‌ ವಿರುದ್ಧ ಕೇಸ್‌ ದಾಖಲಿಸಿದ್ಯಾರು..? ಕೋರ್ಟ್ ಕೊಡಿಸಿದ ಪರಿಹಾರವೆಷ್ಟು ಗೊತ್ತಾ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget