ಕ್ರೈಂರಾಜ್ಯವೈರಲ್ ನ್ಯೂಸ್

ಕುಡಿದ ಮತ್ತಿನಲ್ಲಿ ರೈಲ್ವೆ ಹಳಿ ಮೇಲೆ ಬಿದ್ದ ವ್ಯಕ್ತಿ..! ಮೇಲಿನಿಂದ ರೈಲು ಚಲಿಸಿದರೂ ಆತ ಬದುಕಿದ್ದೇಗೆ..? ಇಲ್ಲಿದೆ ವಿಡಿಯೋ

156

ನ್ಯೂಸ್ ನಾಟೌಟ್: ಕುಡಿದ ಮತ್ತಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ರೈಲ್ವೇ ಹಳಿಗೆ ಬಿದ್ದಿದ್ದಾನೆ. ಮೇಲೆಳಲು ಸಾಧ್ಯವಾಗದೆ ಅಲ್ಲೇ ಮಲಗಿದ್ದಾನೆ. ಅಷ್ಟರಲ್ಲೇ ಅದೇ ಹಳಿಯಿಂದ ರೈಲೊಂದು ವೇಗವಾಗಿ ಬಂದಿದೆ. ಈ ಮಾಹಿತಿ ಪಡೆದ ರೈಲ್ವೇ ಪೊಲೀಸರು ಓಡೋಡಿ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಒಂದು ಸಣ್ಣ ಗಾಯವಿಲ್ಲದೆ ಈತ ಪಾರಾಗಿದ್ದಾನೆ.

ಉತ್ತರ ಪ್ರದೇಶದ ಬಿಜ್ನೋರ್ ಬಳಿ ಈ ಘಟನೆ ನಡೆದಿದೆ. ಬಿಜ್ನೋರ್‌ನ ಪಟ್ಟಣದಲ್ಲಿರುವ ಬಾರ್‌ನಲ್ಲಿ ರಾತ್ರಿ ವೇಳೆ ಕಂಠಪೂರ್ತಿ ಕುಡಿದ ಈತ ನಡೆದುಕೊಂಡೇ ಮನೆ ಸೇರಲು ಮುಂದಾಗಿದ್ದಾನೆ. ನಡೆಯಲು ಸಾಧ್ಯವಾಗದಷ್ಟು ಕುಡಿದ ಕಾರಣ ತೂರಾಡುತ್ತಾ ಸಾಗಿದ್ದಾನೆ. ಆದರೆ ಹೆಚ್ಚಿನ ದೂರ ಸಾಗಲು ಸಾಧ್ಯವಾಗಿಲ್ಲ. ಹಳಿ ಮೇಲೆ ಬಿದ್ದ ಆತನ ಮೇಲೆ ರೈಲು ಸಾಗಿದೆ.ರಾತ್ರಿಯಾಗಿದ್ದ ಕಾರಣ ಲೋಕೋ ಪೈಲೆಟ್‌ಗೆ ಸಮೀಪ ಬರುತ್ತಿದ್ದಂತೆ ರೈಲು ಹಳಿಯಲ್ಲಿ ಓರ್ವ ಬಿದ್ದಿರುವುದು ಗಮನಿಸಿದ್ದಾರೆ. ಪೈಲೆಟ್ ಆತಂಕದಿಂದ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ರೈಲು ಸಾಗಿದರೂ ಈತ ಅಲ್ಲೇ ಮಲಗಿದ್ದಾನೆ. ಈತನ ಮೇಲೆ ಒಂದು ಒಂದು ಗಾಯಗಳಿಲ್ಲ. ಪೊಲೀಸರು ಬಂದು ಈತನನ್ನು ಎಬ್ಬಿಸಿದ್ದಾನೆ. ಹರಸಾಹಸ ಮಾಡಿ ಎದ್ದ ಈತ, ರೈಲು ಸಾಗಿದರೂ ಹೇಗೆ ಪಾರಾದೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಈತನ ವಿಳಾಸ ಪಡೆದು ಮನೆಗೆ ತಲುಪಿಸಿದ್ದಾರೆ.

Click

https://newsnotout.com/2024/08/wayanad-earth-quack-fear-kannada-news-kerala-landslide/
https://newsnotout.com/2024/08/airplane-crash-kannada-news-live-video-kannada-news-brezil/
See also  11 ವರ್ಷದ ಬಾಲಕನ ಹೊಟ್ಟೆಯಲ್ಲಿ 100ಗ್ರಾಂ ಚಿನ್ನದ ಗಟ್ಟಿ..! ಏನಿದು ಘಟನೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget