Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಸೊಂಟದಲ್ಲೊಂದು ಮದ್ಯದ ಬಾಟಲಿ, ಕೈಯಲ್ಲಿ ಶರ್ಟ್‌ ಹಿಡಿದು ಸರ್ಕಾರಿ ಶಾಲೆಗೆ ನುಗ್ಗಿದ ಕುಡುಕ..! ತರಗತಿಯಿಂದ ವಿದ್ಯಾರ್ಥಿಗಳನ್ನು ಓಡಿಸಿ ಶಿಕ್ಷಕರಿಗೆ ಬೆದರಿಕೆ..! ವಿಡಿಯೋ ವೈರಲ್

1.7k

ನ್ಯೂಸ್ ನಾಟೌಟ್: ಕುಡುಕನೊಬ್ಬ ಶಾಲೆಗೆ ನುಗ್ಗಿ ತರಗತಿಯಿಂದ ಮಕ್ಕಳನ್ನು ಓಡಿಸಿ, ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ ಶಾಲೆಯಲ್ಲಿ ಗದ್ದಲ ಸೃಷ್ಟಿಸಿದ ಘಟನೆ ನಡೆದಿದೆ.

ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಕುಡುಕನ ದುರ್ವರ್ತನೆಯನ್ನು ಕಂಡು ನೋಡುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಮೀರತ್‌ ನಲ್ಲಿ ಈ ಆಘಾತಕಾರಿ ಪ್ರಕರಣ ನಡೆದಿದೆ, ಮೀರತ್‌ ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಡುಕನೊಬ್ಬ ಗದ್ದಲ ಸೃಷ್ಟಿಸಿದ್ದಾನೆ. ಕಂಠ ಪೂರ್ತಿ ಮದ್ಯ ಸೇವಿಸಿ ಶಾಲೆಗೆ ನುಗ್ಗಿದ ಆತ ಶರ್ಟ್‌ ಬಿಚ್ಚಿ, ತರಗತಿಗೆ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಓಡಿಸಿ ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ವರದಿ ತಿಳಿಸಿದೆ.

ಕುಡಿದ ಮತ್ತಿನಲ್ಲಿದ್ದ ಆ ದುಷ್ಕರ್ಮಿ ಶಿಕ್ಷಕರ ಮುಂದೆ ತನ್ನ ಶರ್ಟ್ ಬಿಚ್ಚಿ, ಮೇಜಿನ ಮೇಲೆ ಕುಳಿತು ಅವರನ್ನು ಕೊ* ಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಶಿಕ್ಷಕರು ದೂರನ್ನು ನೀಡಿದ್ದು, ಅವರು ನೀಡಿದ ದೂರಿನ ಆಧಾರದ ಮೇರೆಗೆ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸೊಂಟದಲ್ಲೊಂದು ಮದ್ಯದ ಬಾಟಲಿ ಹಾಗೂ ಕೈಯಲ್ಲಿ ಶರ್ಟ್‌ ಹಿಡಿದು ಶಾಲೆಗೆ ನುಗ್ಗಿದ್ದ ಕುಡುಕನೊಬ್ಬ ಗದ್ದಲ ಸೃಷ್ಟಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿಪೊಲೀಸ್ ಠಾಣೆಯಲ್ಲೇ ಜೂಜಾಟದಲ್ಲಿ ತೊಡಗಿದ್ದ ಪೊಲೀಸರು..! ಐವರು ಅಮಾನತ್ತು..!

See also  ವಾರಿಸುದಾರರ ಕೈ ಸೇರಿದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬಿದ್ದು ಸಿಕ್ಕಿದ ಪರ್ಸ್, ಕಂಡಕ್ಟರ್ ಕಾರ್ಯಕ್ಕೆ ಶ್ಲಾಘನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget