Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಕುಡಿದು ನಡು ರಸ್ತೆಯಲ್ಲಿ ತೂರಾಡಿದ ಕಾಲೇಜು ಪ್ರಾಧ್ಯಾಪಕ..! ಮಾನಸಿಕ ಅಸ್ವಸ್ಥನಿರಬಹುದೆಂದು ಆಂಬ್ಯುಲೆನ್ಸ್ ಗೆ ಕರೆ ಮಾಡಿದ ಸ್ಥಳೀಯರು..! ವಿಡಿಯೋ ವೈರಲ್

949

ನ್ಯೂಸ್‌ ನಾಟೌಟ್: ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷರೊಬ್ಬರು ಕಂಠಪೂರ್ತಿ ಕುಡಿದು ಬೇಜಾವಾಬ್ದಾರಿಯಿಂದ ವರ್ತಿಸಿದ್ದಾರೆ. ಕಾಲೇಜು ಪ್ರಾಧ್ಯಾಪಕ ಎಣ್ಣೆ ಏಟಲ್ಲಿ ತೂರಾಡುತ್ತಾ ದಾರಿ ಕಾಣದೆ ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದು, ಈ ದೃಶ್ಯವನ್ನು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಉಪನ್ಯಾಸಕರ ಈ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮಾಹಿತಿಗಳ ಪ್ರಕಾರ ಈ ಘಟನೆ ಮಧ್ಯಪ್ರದೇಶದ ರೇವಾ ನಗರದ ಪಿಲಿ ಕೋಥಿ ಕಾಂಪೌಂಟ್‌ ಬಳಿ ನಡೆದಿದೆ. ಅಲ್ಲಿದ್ದ ಸ್ಥಳೀಯರು ಇದು ಯಾರೋ ಮಾನಸಿಕ ಅಸ್ವಸ್ಥನಿರಬಹುದೆಂದು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದ್ರೆ ವಿಡಿಯೋ ವೈರಲ್‌ ಆದ ಬಳಿಕ ಈ ವ್ಯಕ್ತಿ ರೇವಾ ಜಿಲ್ಲೆಯ ಮಧ್ಯಪ್ರದೇಶದಲ್ಲೊಂದು ಸರ್ಕಾರಿ ಬಾಲಕಿಯ ಕಾಲೇಜಿನ ಪ್ರಾದ್ಯಾಪಕ ಅಭಿಷೇಕ್‌ ಮಾಳವೀಯ ಎಂಬುದು ತಿಳಿದು ಬಂದಿದೆ.

ಅತಿಥಿ ಉಪನ್ಯಾಸಕರಾರ ಇವರು ಬಿ.ಕಾಂ ವಿದ್ಯಾರ್ಥಿಗಳಿಗೆ ಫಿನಾನ್ಸ್‌ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದರು. ಆದರೆ ಆ ಉಪನ್ಯಾಸಕ ಶನಿವಾರ (ಮಾ. 29) ಕಂಠಪೂರ್ತಿ ಕುಡಿದು ಸಾರ್ವಜನಿಕ ಸ್ಥಳದಲ್ಲಿಯೇ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಆ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಇದನ್ನೂ ಓದಿ:ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಮಧ್ಯೆ ರೀಲ್ಸ್ ಮಾಡಿದ ಪೊಲೀಸ್ ಅಧಿಕಾರಿಯ ಪತ್ನಿ ಮೇಲೆ ಎಫ್.ಐ.ಆರ್..! ವಿಡಿಯೋ ವೈರಲ್

ಪಾಳು ಬಾವಿಯಲ್ಲಿ 17 ಕೆ.ಜಿ ಚಿನ್ನ ಬಚ್ಚಿಟ್ಟಿದ್ದ ಸಹೋದರರು ಅರೆಸ್ಟ್..! ದರೋಡೆಗೂ ಮುನ್ನ ಗಡಿ ಚೌಡಮ್ಮನಿಗೆ ಅಷ್ಟಧಿಗ್ಬಂಧನ ಪೂಜೆ ಮಾಡಿಸಿದ್ದ ಖದೀಮರು..!

See also  ಯುವತಿಗೆ ಬಸ್ ನಲ್ಲಿ ಕಿರುಕುಳ ಪ್ರಕರಣ: ಹಿಂದೂ ಸಂಘಟನೆಯವರು ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷಿಸಿದರೇ..?, ಯುವತಿಯ ಮೈ ಕೈ ಟಚ್ ಮಾಡಿ ಅಸಭ್ಯ ವರ್ತನೆ, ದೂರಿನಲ್ಲಿ ಏನಿದೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget