Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಡ್ರಗ್ಸ್​ ಜೊತೆ ಸಿಕ್ಕಿಬಿದ್ದ ಮಹಿಳಾ ಪೊಲೀಸ್ ಅಧಿಕಾರಿ ಅರೆಸ್ಟ್​..! ಆ್ಯಂಟಿ ನಾಕ್ರೊಟಿಕ್ಸ್​ ಟಾಸ್ಕ್​ ಫೋರ್ಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಕೆಯಿಂದಲೇ ಕೃತ್ಯ..!

1.2k

ನ್ಯೂಸ್ ನಾಟೌಟ್: ಪಂಜಾಬ್ ಪೊಲೀಸ್ ಇಲಾಖೆಯ ಮಹಿಳಾ ಅಧಿಕಾರಿ ಬಳಿ ಸುಮಾರು 17.71 ಗ್ರಾಂನಷ್ಟು ಹೆರಾಯಿನ್ ಡ್ರಗ್ಸ್ ಪತ್ತೆಯಾಗಿದೆ. ಪೊಲೀಸ್ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬಳಿ ಇದ್ದ ಡ್ರಗ್ಸ್ ವಶಪಡಿಸಿಕೊಂಡು, ಮಹಿಳಾ ಪೇದೆಯನ್ನು ಡಿಸ್ಮಿಸ್ ಮಾಡಲಾಗಿದೆ ಎಂದು ಬಾತಿಂದಾ ಪೊಲೀಸರು ಹೇಳಿದ್ದಾರೆ.

ಈಗಾಗಲೇ ಮಹಿಳಾ ಅಧಿಕಾರಿ ಅಮನ್ ​ದೀಪ್ ಕೌರ್ ​ರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳಾ ಅಧಿಕಾರಿ ಪಂಜಾಬ್ ​ನ ಆ್ಯಂಟಿ ನಾಕ್ರೊಟಿಕ್ಸ್​ ಟಾಸ್ಕ್​ ಫೋರ್ಸ್​ನ ಸಿಬ್ಬಂದಿಯಾಗಿದ್ದರು ಎಂದು ತಿಳಿದು ಬಂದಿದೆ. ಬಾದಲ್ ಫ್ಲೈ ಓವರ್ ಬಳಿ ಅವರ ಎಸ್ ​​ಯು ಮಹಿಂದ್ರಾ ಥಾರ್ ​ನಲ್ಲಿ ಸುಮಾರು 17.7 ಗ್ರಾಂನಷ್ಟು ಮಾದಕದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಬತಿಂದಾದ ಡಿಎಸ್​ಪಿ ಹರ್ಬನ್ ಸಿಂಗ್ ಹೇಳಿದ್ದಾರೆ.

ಮಹಿಳಾ ಪೊಲೀಸ್ ಬಳಿ ಮಾದಕದ್ರವ್ಯ ಇರುವ ಸುಳಿವು ಪೊಲೀಸ್ ಇಲಾಖೆಗೆ ದೊರೆತಿತ್ತು. ಈ ವೇಳೆ ತಪಾಸಣೆಗೆ ಇಳಿದ ಪಂಜಾಬ್​ ಪೊಲೀಸರಿಗೆ ಮಹಿಳಾ ಪೊಲೀಸ್ ಪೇದೆಯ ವಾಹನದ ಗೀಯರ್ ಶಿಫ್ಟ್ ​ನಲ್ಲಿ ಬಾಕ್ಸ್​ ಒಂದು ಪತ್ತೆಯಾಗಿದೆ.

ಇದನ್ನು ತೆಗೆದು ನೋಡಿದಾಗ ಅದರಲ್ಲಿ ಹೆರಾಯಿನ್​​ ಇತ್ತು ಎನ್ನಲಾಗಿದೆ. ಐಜಿಪಿ ಮಾತನಾಡಿ, ಈಗಾಗಲೇ ಮಹಿಳಾ ಅಧಿಕಾರಿಯನ್ನು ಆಕೆಯ ಸ್ಥಾನದಿಂದ ವಜಾಗೊಳಿಸಲಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿದೇಹದ ದುರ್ನಾತಕ್ಕೆ ವಿಮಾನದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳ..! ಮಧ್ಯ ಪ್ರವೇಶಿಸಿದ ಸಿಬ್ಬಂದಿಗೆ ಕಚ್ಚಿದ ಮಹಿಳೆ..! ವಿಡಿಯೋ ವೈರಲ್

See also  ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾಗ ಸಂಸತ್‌ ನಲ್ಲಿ ಕುಸಿದು ಬಿದ್ದ ಕಾಂಗ್ರೆಸ್ ಸಂಸದೆ..! ಇಲ್ಲಿದೆ ವಿಡಿಯೋ

ನಾಯಿಗಳು ಬೊಗಳಿ ಕಿರಿ-ಕಿರಿ ಮಾಡುತ್ತವೆ ಎಂದು ವಿಷ ಹಾಕಿ ಕೊಂದ ವ್ಯಕ್ತಿ..! 25ಕ್ಕೂ ಹೆಚ್ಚು ನಾಯಿಗಳು ಸಾವು..!

 

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget