ವೈರಲ್ ನ್ಯೂಸ್ಸಿನಿಮಾ

Drone prathap: ಡ್ರೋನ್ ಪ್ರತಾಪ್ ಜನ್ಮದಿನದಂದು 5 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ, ಈ ಬಗ್ಗೆ ಪ್ರತಾಪ್ ಹೇಳಿದ್ದೇನು..?

218

ನ್ಯೂಸ್ ನಾಟೌಟ್: ಬಿಗ್‌ ಬಾಸ್‌ ಬಳಿಕ ಡ್ರೋನ್‌ ಪ್ರತಾಪ್‌ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದು, ಇದರ ಜೊತೆಗೆ ವ್ಲಾಗ್ ಮಾಡಿ ಕೆಲ ದೇಶಗಳ ವೈವಿದ್ಯತೆಯನ್ನು ಡಾ.ಬ್ರೋ ಮಾದರಿಯಲ್ಲಿ ತಿಳಿಸುತ್ತಿದ್ದಾರೆ.

ಇದರ ಜೊತೆಗೆ ಈ ಸಲದ ಪ್ರತಾಪ್ ಜನ್ಮದಿನದಂದು ವಿಶೇಷವಾಗಿ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. “ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ಡಾ.ರಾಜ್‌ಕುಮಾರ್ ಸರ್ ಹೇಳ್ತಾರೆ ನೇತ್ರದಾನ ಮಹಾದಾನ ಅಂತ. ಮುಂಬರುವ ಜೂನ್ 11ಕ್ಕೆ ನನ್ನ ಹುಟ್ಟುಹಬ್ಬವಿದೆ ಸ್ನೇಹಿತರೇ ನನಗಂತೂ ಭಾರೀ ಎಕ್ಸೈಟ್‌ಮೆಂಟ್ ಇದೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎಂದು ನಾನು ನಿರ್ಧರಿಸಿದ್ದೇನೆ. ಅದಕ್ಕಾಗಿ ಯಾರಾದರೂ ಬಡವರಿಗೆ 5 ಜನಕ್ಕೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೇನೆ.

ನಿಮ್ಮಲ್ಲಿ ಯಾರಿಗಾದರೂ ಕಣ್ಣಿನ ಸಮಸ್ಯೆಯಿದ್ದರೆ ನಮಗೆ ಮೆಸೇಜ್‌ ಮಾಡಬಹುದು ಅಥವಾ ಕಮೆಂಟ್‌ ಮಾಡಿ ತಿಳಿಸಬಹುದು” ಎಂದು ಹೇಳಿದ್ದಾರೆ. ಬಿಗ್‌ ಬಾಸ್‌ ಸೀಸನ್‌ -10 ರನ್ನರ್‌ ಅಪ್‌ ಆದ ಬಳಿಕ ವೇದಿಕೆಯಲ್ಲೇ ಅವರು, ಬಿಗ್‌ ಬಾಸ್‌ ನಿಂದ ಬಂದ ಹಣವನ್ನು ಬಡವರ ಸಹಾಯಕ್ಕಾಗಿ ಬಳಸುತ್ತೇನೆ ಎಂದು ಹೇಳಿದ್ದರು ಮತ್ತು ಮಾಡುತ್ತಿದ್ದಾರೆ.

ಹೇಳಿದ ಹಾಗೆಯೇ ಅವರು ಅಗತ್ಯವಿರುವವರಿಗೆ ರೇಷನ್‌ ಹಾಗೂ ಬಡ ಹುಡುಗನೊಬ್ಬನಿಗೆ ಕಾರ್ಯಕ್ರಮದಿಂದ ಬಂದ ವಾಹನವನ್ನು ನೀಡಿದ್ದಾರೆ, ಈ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Click 👇

https://newsnotout.com/2024/05/dysp-cyber-case-madikeri-bank-account
https://newsnotout.com/2024/05/inspector-and-acp-threat-case
https://newsnotout.com/2024/05/lipslick-ban-in-nk-and-rules
See also  ಸುಮಲತಾ ಮನೆಗೆ ಚಾಲೆಂಜಿಂಗ್ ಸ್ಟಾರ್ ದಿಢೀರ್‌ ಭೇಟಿ; ಟಿಕೆಟ್ ಜಟಾಪಟಿಯ ನಡುವೆ ದರ್ಶನ್ ಭೇಟಿ ನೀಡಿದ್ದೇಕೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget