ಕ್ರೈಂವೈರಲ್ ನ್ಯೂಸ್

‘ಡ್ರೋನ್ ಪ್ರತಾಪ್ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡ್ತಾರೆ’ ಎಂದದ್ದೇಕೆ..? ವಿವಾದಾತ್ಮಕ ಹೇಳಿಕೆಯ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ನ್ಯೂಸ್ ನಾಟೌಟ್ : ಬಿಗ್ ಬಾಸ್ ಕನ್ನಡದಲ್ಲಿ ನ.3 ಸಂಚಿಕೆಯಲ್ಲಿ ವಿನಯ್ ವರ್ತನೆಗೆ, ನಮ್ರತಾ ಚಮಚಾಗಿರಿಗೆ ಸುದೀಪ್ ಖಡಕ್ ಆಗಿ ಉತ್ತರ ನೀಡಿದ್ದರು. ಇದೀಗ ಡ್ರೋನ್ ಪ್ರತಾಪ್ (Drone Prathap) ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ ಎಂದು ಹೀಯಾಳಿಸಿದ ವಿನಯ್, ಇಶಾನಿಗೆ ಸುದೀಪ್ ಖಾರವಾಗಿಯೇ ಉತ್ತರಿಸಿದ್ದಾರೆ.

ವಾರಾಂತ್ಯದಲ್ಲಿ ಸ್ಪರ್ಧಿಗಳ ತಪ್ಪನ್ನ ತೋರಿಸಿ ಸುದೀಪ್ ತಿದ್ದಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಮಹಿಳೆಯರನ್ನ ಕೆಟ್ಟ ದೃಷ್ಟಿಯಿಂದ ನೋಡ್ತಾರೆ ಎಂದು ವಿನಯ್ (Vinay)ಹೇಳಿದ್ದರು. ಅವರ ಆರೋಪಕ್ಕೆ ಇಶಾನಿ (Eshani) ಕೂಡ ಹೌದು ಎಂಬಂತೆ ವರ್ತಿಸಿದ್ದರು ಇದನ್ನು ಸುದೀಪ್ ಪ್ರಶ್ನಿಸಿದ್ದಾರೆ.

ಪ್ರತಾಪ್ ಮನೆ ಹೆಣ್ಣು ಮಕ್ಕಳನ್ನ ನೋಡುವ ದೃಷ್ಟಿ ಸರಿಯಿಲ್ಲ ಹೌದಾ ಎಂದು ಕಿಚ್ಚ ಸ್ಪರ್ಧಿಗಳಿಗೆ ಕೇಳಿದ್ದಾರೆ. ಇಶಾನಿ, ತುಕಾಲಿ ಸಂತೂ, ವಿನಯ್ ಮಾತ್ರ ಯೆಸ್ ಎಂದು ಹೇಳಿದ್ದಾರೆ. ಕಿಚ್ಚನ ಪ್ರಶ್ನೆಗೆ ಇಶಾನಿ, ಅವರು ಸರಿಯಾಗಿ ಮಾತನಾಡಲ್ಲ ಎಂದು ಅನಿಸುತ್ತೇ ಎಂದಿದ್ದಾರೆ.

ನನ್ನ ಪ್ರಶ್ನೆಗೂ ನಿಮ್ಮ ಉತ್ತರಕ್ಕೂ ಸಂಬಂಧವಿಲ್ಲ ಎಂದು ಇಶಾನಿಗೆ ಕಿಚ್ಚ ಸುದೀಪ್ ತಿರುಗೇಟು ನೀಡಿದ್ದಾರೆ. ಬಳಿಕ ತುಕಾಲಿ ಸಂತೂ ಪ್ರತಿಕ್ರಿಯಿಸಿ, ಡ್ರೋನ್ ಒಳಗೆ ರೊಮ್ಯಾಂಟಿಕ್ ಹೀರೋ ಇದ್ದಾನೆ ಅನಿಸುತ್ತೆ ಎಂದಿದ್ದಾರೆ. ಅದಕ್ಕೆ ನಾನು ರೊಮ್ಯಾಂಟಿಕ್ ಬಗ್ಗೆ ಮಾತನಾಡೇ ಇಲ್ಲ ಎಂದಿದ್ದಾರೆ ಕಿಚ್ಚ. ಬಳಿಕ ವಿನಯ್ ರಿಯಾಕ್ಟ್ ಮಾಡಿ, ಡ್ರೋನ್ ಏನು ಯೋಚನೆ ಮಾಡಿ ಎಲ್ಲಿ ನೋಡ್ತಾರೋ ಗೊತ್ತಿಲ್ಲ ಎಂದು ಅವರ ನೋಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯೂ ಆರ್ ರಾಂಗ್, ಯಾರೆನ್ನೇ ಕೆಟ್ಟ ದೃಷ್ಟಿ ನೋಡಿದ್ದೆಯಾದರೆ ಮತ್ತೆ ಅವರ ಸ್ಪರ್ಶ ಮಾಡಿದ್ದೆ ಆದರೆ, ಆ ಸ್ಪರ್ಶದಲ್ಲಿ ತಿಳಿಯುತ್ತೆ ಇದು ಸರಿಯಿಲ್ಲ ಅಂತ ಗೊತ್ತಾಗುತ್ತೆ. ಅದನ್ನ ನೀವೂ ನಂಬಬೇಕೆ ವಿನಹಃ ಯಾರದೋ ಪ್ರೇರಣೆಯಿಂದ ಅಲ್ಲ ಎಂದು ಪ್ರತಾಪ್ ಪರ ನಿಂತು ವಿನಯ್, ತುಕಾಲಿ, ಇಶಾನಿಗೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Related posts

ರೈತರಿಂದ ಸರ್ಕಾರಿ ಅಧಿಕಾರಿಗಳಿಗೆ ಮುತ್ತಿಗೆ..! ಬಿಡಿಸಲು ಬಂದ ಪೊಲೀಸರ ಮೇಲೆ ಮಚ್ಚಿನಿಂದ ದಾಳಿ..!

ಸ್ನಾನಕ್ಕೆಂದು ಹೋದ ಯುವಕ ಸುಳಿಗೆ ಸಿಕ್ಕಿ ಸಾವು

ಬಿಗ್ ಬಾಸ್ ಸ್ಪರ್ಧಿ ಪ್ರೆಗ್ನೆಂಟ್..? ಈ ಬಗ್ಗೆ ಆಕೆ ಹೇಳಿದ್ದೇನು? ಆಕೆಯನ್ನು ಮನೆಯಿಂದ ಹೊರ ಹಾಕಲು ತಯಾರಿ ನಡೆಯುತ್ತಿದೆಯಾ?