ಕಾಸರಗೋಡುವಿಡಿಯೋವೈರಲ್ ನ್ಯೂಸ್

ಕೇರಳ: ಕಾಲಿನ ಮೂಲಕ ಕಾರು ಚಲಾಯಿಸಿ​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ..! ಇಲ್ಲಿದೆ ವೈರಲ್ ವಿಡಿಯೋ

212

ನ್ಯೂಸ್ ನಾಟೌಟ್ : ಅಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬಂತೆ ಕೈಗಳಿಲ್ಲದಿದ್ದರೂ ಕೊರಗುತ್ತಾ ಕೂರದೆ ಕಾಲಿನ ಸಹಾಯದಿಂದ ಕಾರು ಚಲಾಯಿಸಿ ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾಳೆ ಕೇರಳದ ಜಿಲುಮೋಲ್​​ ಮರಿಯೆಟ್ ಥಾಮಸ್.

ಈಕೆ ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿದ್ದ ಮರಿಯೆಟ್ ಥಾಮಸ್ ಚಿಕ್ಕ ವಯಸ್ಸಿನಲ್ಲೇ ಕಾಲಿನ ಮೂಲಕವೇ ದೈನಂದಿನ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಂಡಿದ್ದಳು. ಇದೀಗ ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ ದೇಶದ ಗಮನ ಸೆಳೆದಿದ್ದಾಳೆ. ಇದಲ್ಲದೇ ಎರಡು ಕೈಗಳಿಲ್ಲದೇ ಡ್ರೈವಿಂಗ್​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಮರಿಯೆಟ್ ಥಾಮಸ್, ಇತ್ತೀಚೆಗಷ್ಟೇ ತಾನು ಕಾರು ಚಲಾಯಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾಳೆ. ಮಾರ್ಚ್​​ 28ರಂದು @jilumolmarietthomas ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ಇದೀಗಾಗಲೇ 60ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇದಲ್ಲದೆ, 2.5 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಕೈಗಳಿಲ್ಲದಿದ್ದರೂ, ಕಾಲಿನ ಸಹಾಯದಿಂದ ಕಾರು ಚಲಾಯಿಸುವುದರ ಜೊತೆಗೆ ಚಿತ್ರಕಲೆಯಲ್ಲೂ ಸೈ ಎನಿಸಿಕೊಂಡಿರುವ ಈಕೆ ಸಾಕಷ್ಟು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ.

See also  ನಟ ಫಹಾದ್ ಫಾಜಿಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಮಾನವ ಹಕ್ಕುಗಳ ಆಯೋಗ..! ಅಂದು ರಾತ್ರಿ ಆಸ್ಪತ್ರೆಯಲ್ಲೇನಾಗಿತ್ತು..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget