ಕ್ರೈಂ

ಹೆದ್ದಾರಿ ಬದಿಯ ಮರಕ್ಕೆ ಗುದ್ದಿ ನಿಂತ ಬಸ್ , ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ

220

ನ್ಯೂಸ್ ನಾಟೌಟ್ : ಬಸ್ ವೊಂದು ಹೆದ್ದಾರಿ ಬದಿಯಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದು ಸ್ವಲ್ಪದರಲ್ಲೇ ಅದರೊಳಗಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ಬೆಳಗ್ಗೆ ಕಾಪುವಿನಲ್ಲಿ ನಡೆದಿದೆ.

ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಖಾಸಗಿ ಸರ್ವಿಸ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತೀರ್ಥದಲ್ಲಿ ಈ ಘಟನೆ ಸಂಭವಿಸಿದೆ. ಬಸ್ಸಿನಲ್ಲಿದ್ದ ಓರ್ವ ಮಹಿಳೆಗೆ ಗಾಯಗಳುಂಟಾಗಿವೆ.

ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಬಸ್ ನಲ್ಲಿ 6-7 ಮಂದಿ ಪ್ರಯಾಣಿಕರು ಮಾತ್ರ ಇದ್ದುದ್ದರಿಂದ ಮತ್ತು ಬಸ್ ಕೂಡಾ ನಿಧಾನವಾಗಿ ಸಂಚರಿಸುತ್ತಿದ್ದುದರಿಂದ ಹೆಚ್ಚಿನ ಅಪಾಯವುಂಟಾಗಿಲ್ಲ. ಸ್ಥಳೀಯರು ಬಸ್ ನಲ್ಲಿದ್ದವರಿಗೆ ಹೊರಗೆ ಬರಲು ಸಹಕರಿಸಿದ್ದು ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಸರ್ಕಾರಿ ಬಸ್ ಗೆ ಕಾರು ಡಿಕ್ಕಿ..! ದೇಗುಲಕ್ಕೆ ಹೊರಟಿದ್ದ ಒಂದೇ ಕುಟುಂಬದ ನಾಲ್ವರು ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget