ರಾಜ್ಯವೈರಲ್ ನ್ಯೂಸ್

ಸರ್ಕಾರಿ ಬಸ್ ನೊಳಗೆ ‘ಕೊಡೆ’ ಹಿಡಿದ ಡ್ರೈವರ್, ವಿಡಿಯೋ ಮಾಡಿದ ಲೇಡಿ ಕಂಡೆಕ್ಟರ್ ಅಮಾನತು, ಇಬ್ಬರು ವಿಡಿಯೋ ವೈರಲ್ ಮಾಡಿದ್ದೇಕೆ..? ತನಿಖೆ ವೇಳೆ ಹೊರಬಿತ್ತು ಅಸಲಿ ಸತ್ಯ

266

ನ್ಯೂಸ್ ನಾಟೌಟ್: ಹುಡುಗಾಟ ಆಡುವುದನ್ನು ನೋಡಿದ್ದೇವೆ. ಆದರೆ ಮಂಗನಾಟ ಆಡೋಕೆ ಹೋದ್ರೆ ಭಾರಿ ತಲೆದಂಡ ತೆರಬೇಕಾಗುತ್ತದೆ ಅನ್ನುವುದಕ್ಕೆ ಬಸ್ ಡ್ರೈವರ್ ಹಾಗೂ ಕಂಡೆಕ್ಟರ್ ಸಾಕ್ಷಿಯಾಗಿದ್ದಾರೆ. ಏನಿದು ಘಟನೆ..? ಮೇ23ಕ್ಕೆ ವಿಡಿಯೋವೊಂದು ಭಾರಿ ವೈರಲ್ ಆಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ವೊಂದರ ಡ್ರೈವರ್ ಮಳೆಯ ನಡುವೆ ಬಸ್ ತೆಗೆದುಕೊಂಡು ಹೋಗುತ್ತಿರುತ್ತಾನೆ. ಒಂದು ಕೈನಲ್ಲಿ ಛತ್ರಿ ಹಿಡಿದುಕೊಂಡು ಮತ್ತೊಂದು ಕೈನಲ್ಲಿ ಸ್ಟೇರಿಂಗ್ ಹಿಡಿದುಕೊಂಡು ಡ್ರೈವರ್ ಚಾಲನೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಸದ್ಯ ಈ ವಿಡಿಯೋ ಇಬ್ಬರ ನೌಕರಿಗೂ ಕುತ್ತು ತಂದಿದೆ. ಮೋಜಿಗಾಗಿ ಮಾಡಿದ ವಿಡಿಯೋದಿಂದ ಇಬ್ಬರು ತಮ್ಮ ಕೆಲಸವನ್ನೇ ಕಳೆದುಕೊಳ್ಳುವಂತಾಗಿದೆ. ಈ ವಿಡಿಯೋ ಹೊರ ಬರುತ್ತಿದ್ದ ಹಿರಿಯ ಅಧಿಕಾರಿಗಳು ಬಸ್ ಸೋರುತ್ತಿದ್ದದ್ದು ನಿಜವೇ ಅನ್ನುವುದನ್ನು ಪರಿಶೀಲಿಸುವುದಕ್ಕೆ ತಂಡವನ್ನು ರಚಿಸಿದ್ದಾರೆ. ಬಸ್ ಪರೀಕ್ಷಿಸಿದಾಗ ಎಲ್ಲವೂ ಸರಿ ಇತ್ತು. ಮತ್ತೆ ನೀವ್ಯಾಕೆ ಹೀಗೆ ವಿಡಿಯೋ ಮಾಡಿದ್ರಿ ಅಂದಿದ್ದಕ್ಕೆ ಮನೋರಂಜನೆಗಾಗಿ ಚಿತ್ರೀಕರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ವರದಿ ಆಧಾರದ ಮೇಲೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಿಬ್ಬಂದಿಯ ಕರ್ತವ್ಯ ಲೋಪ ಹಾಗೂ ಸಂಸ್ಥೆ ಘನತೆಗೆ ಧಕ್ಕೆಯಾಗುವಂತಹ ಕೆಲಸವಾಗಿದ್ದರಿಂದ ಚಾಲಕ-ನಿರ್ವಾಹಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

See also  ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್ ..! 2022 ರ ಪ್ರಕರಣಕ್ಕೆ ಮರು ಜೀವ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget