ಕ್ರೈಂವೈರಲ್ ನ್ಯೂಸ್

ನೀರು ತರಲು ಹೋಗಿದ್ದ ಮಹಿಳೆಗೆ ವಿದ್ಯುತ್ ಶಾಕ್..! ಕುಸಿದ ಮಹಿಳೆ ಪವಾಡಸದೃಶ್ಯವಾಗಿ ಪಾರು..!

243

ನ್ಯೂಸ್ ನಾಟೌಟ್: ಇತ್ತೀಚೆಗೆ ಬಿಸಿಲ ತಾಪ ಹೆಚ್ಚಾಗಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಕುಡಿಯಲು ನೀರು ತರಲೆಂದು ಬಂದ ಮಹಿಳೆಯೊಬ್ಬಳಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಕುಸಿದ ಬಿದ್ದ ಘಟನೆ ಬಾಗಲಕೋಟೆಯ ಬನಹಟ್ಟಿ ನಗರದ ಪೇಟೆಯ ವಿಠ್ಠಲ್ ಮಂದಿರದ ಬಳಿ ಸಂಭವಿಸಿದೆ.

ಅದೃಷ್ಟವಶಾತ್ ಪವಾಡದ ರೀತಿಯಲ್ಲಿ ಮಹಿಳೆ ಬದುಕುಳಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋರ್​ವೆಲ್​ಗೆ ನೀರು ತರಲು ಹೋಗಿದ್ದ ಮಹಿಳೆ, ಕರೆಂಟ್​ ಬಾಕ್ಸ್​ನೊಳಗೆ ಸ್ವಿಚ್​ ಆನ್ ಮಾಡಲು ಕೈ ಹಾಕಿದ್ದಾರೆ. ಈ ವೇಳೆ ವಿದ್ಯುತ್ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದ ಆಕೆಯನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬದುಕುಳಿದ ಮಹಿಳೆಯನ್ನು ಶೃತಿ ಹಾಸಲಕರ್(30) ಎಂದು ಗುರುತಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರದಲ್ಲಿ ನಡೆದ ಘಟನೆ ಸಂಭವಿಸಿದ್ದು, ಮಹಿಳೆಗೆ ವಿದ್ಯುತ್ ಸ್ಪರ್ಷಿಸಿದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಮಹಿಳೆಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.

See also  ʼಜೈ ಶ್ರೀರಾಮ್ʼ ಗೀತೆ ಹಾಕಿ ನೃತ್ಯ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! 24 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget