ಸುಳ್ಯ

ಸುಳ್ಯ : ಚರಂಡಿ ಬಿಟ್ಟು ಹೆದ್ದಾರಿಯಲ್ಲೇ ಹರಿಯುತ್ತಿದೆ ಮಳೆ ನೀರು..!, ನಿರ್ವಹಣೆ ಕೊರತೆಯಿಂದ ವಾಹನ ಸಾವರರು, ಸಾರ್ವಜನಿಕರಿಗೆ ತೊಂದರೆ

ನ್ಯೂಸ್ ನಾಟೌಟ್ : ಚರಂಡಿ ವ್ಯವಸ್ಥೆಯಿದ್ದರೂ ನಿರ್ವಹಣೆ ಕೊರತೆಯಿಂದ ಸುಳ್ಯ ಪೇಟೆಯಲ್ಲಿ ಮಳೆ ನೀರು ಹೆದ್ದಾರಿಯಲ್ಲೇ ಹರಿಯುವ ಸ್ಥಿತಿ ನಿರ್ಮಾಣವಾಗಿದೆ.

ಬುಧವಾರ ಸಾಯಂಕಾಲ ಸುರಿದ ಮಳೆಗೆ ಸರಿಯಾಗಿ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಯಲ್ಲೇ ಹರಿಯುತ್ತಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಭಾರಿ ತೊಂದರೆಯಾಗಿದೆ.

ಸುಳ್ಯ ನಗರದ ಮುಖ್ಯ ರಸ್ತೆಯ ದ್ವಾರಕ ಹೋಟೆಲ್‌ ಬಳಿಯಿಂದ ಜಟ್ಟಿಪಳ್ಳ ದವರೆಗೆ ಚರಂಡಿ ವ್ಯವಸ್ಥೆ ಇದ್ದರೂ ನಿರ್ವಹಣೆ ಕೊರತೆಯಿಂದ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಇದರಿಂದ ಫುಟ್‌ಪಾತ್‌ನಲ್ಲಿ ಸಂಚರಿಸುವ ಪಾದಚಾರಿಗಳ ಮೇಲೆ ವಾಹನ ಹಾದು ಹೋಗುವಾಗ ಕೆಸರು ನೀರಿನ ಸಿಂಚನವಾಗುತ್ತಿದೆ. ನೀರು ಸರಿಯಾಗಿ ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲೇ ಹೋಗುತ್ತಿದೆ. ಆದಷ್ಟು ಬೇಗ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮವಹಿಸಿ ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯಲು ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

ಸುಳ್ಯ: ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ 21ಮಂದಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ಬಳ್ಪ: ಪ್ರಗತಿ ಅಚ್ಚು ಸೇರಿದಂತೆ ಮೂವರಿಗೆ ಸನ್ಮಾನ, ಕೃಷ್ಣಾಷ್ಟಮಿ ಕಾರ್ಯಕ್ರಮದಲ್ಲಿ ಆಪತ್ಬಾಂಧವರಿಗೆ ಗೌರವ

ಪಂಜದಲ್ಲಿ ಅಕ್ರಮ ದನ ಸಾಗಾಟ, ಪಿಕಪ್‌ ವಾಹನ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು