ವೈರಲ್ ನ್ಯೂಸ್

ಕನಸಿನ ಹುಡುಗನಿಗಾಗಿ 42 ವರ್ಷ ವಯಸ್ಸಿನ ವರೆಗೆ ಮದುವೆಯಾಗದೆ ಕಾದ ಆಕೆ ಕೊನೆಗೆ ಮಾಡಿದ ವಿಚಿತ್ರ ನಿರ್ಧಾರವೇನು? 10 ಲಕ್ಷ ಖರ್ಚು ಮಾಡಿ ತನ್ನನ್ನು ತಾನೇ ಮದುವೆಯಾದ ಈಕೆ ಹೇಳಿದ್ದೇನು? ಏನಿದು ವಿಚಿತ್ರ ಪ್ರೇಮ ಕಥೆ?

259

ನ್ಯೂಸ್ ನಾಟೌಟ್: ಮದುವೆಯಾಗ ಬಯಸುವ ಸಂಗಾತಿಯ ಬಗ್ಗೆ ನಿರೀಕ್ಷೆಗಳು ಸಹಜ. ಇದೀಗ ಲಂಡನ್​ನ ಮಹಿಳೆಯೊಬ್ಬಳು ಸರಿಯಾದ ಗಂಡು ಸಿಗಲು ಕಾಯ್ದು ಕಾಯ್ದು ಬೇಸತ್ತು ನಿರಾಸೆಗೊಂಡು ಒಂದು ವಿಚಿತ್ರ ನಿರ್ಧಾರಕ್ಕೆ ಬಂದಿದ್ದಾಳೆ.

ತನ್ನನ್ನು ತಾನೇ ಮದುವೆಯಾಗವ ನಿರ್ಧಾರ ಅದಾಗಿತ್ತು, ಈ ಮದುವೆಗಾಗಿ ರೂ. 10 ಲಕ್ಷ ಖರ್ಚು ಮಾಡಿದ್ದಾಳೆ. ಪ್ರತೀ ತಿಂಗಳು ತನ್ನ ಆದರ್ಶಯುತ ಮದುವೆಗಾಗಿ ಎಂದು ಮೀಸಲಿಡುತ್ತಿದ್ದ ಉಳಿತಾಯದ ಹಣವನ್ನೇ ಇದಕ್ಕೆ ತೊಡಗಿಸಿದ್ದಾಳೆ ಎನ್ನಲಾಗಿದೆ.

ಈಕೆಯ ಹೆಸರು ಸಾರಾ ವಿಲ್ಕಿನ್ಸನ್​ ವಯಸ್ಸು 42. ಅಂತೂ ತನ್ನ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳಬೇಕೆನ್ನುವ ಆಸೆಯನ್ನು ಈಕೆ ಈಡೇರಿಸಿಕೊಂಡಿದ್ದಾಳೆ ಎನ್ನಲಾಗಿದೆ.

ತನ್ನನ್ನು ತಾನೇ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಸಾರಾ​ ನಿಶ್ಚಿತಾರ್ಥಕ್ಕಾಗಿ ಉಂಗುರ ಖರೀದಿಸಿದಳು. ನಂತರ ಮದುವೆಯ ತಯಾರಿ ನಡೆಸಿದಳು. ಲಂಡನ್​ ನ ಸಫೊಲ್ಕ್‌ನ ಫೆಲಿಕ್ಸ್‌ಸ್ಟೋವ್‌ ಎಂಬಲ್ಲಿರುವ ಹಾರ್ವೆಸ್ಟ್ ಹೌಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಮದುವೆ ದಿನವನ್ನು ಆಚರಿಸಿಕೊಂಡಿದ್ದಾಳೆ. ಸಾರಾಹ್​, ‘ತಾನು ಹೀಗೆ ಎಲ್ಲರ ಗಮನ ಸೆಳೆದು ಕೇಂದ್ರಬಿಂದುವಾಗಿರಲು ಈ ದಿನ ಅತ್ಯಂತ ಸೂಕ್ತ ಮತ್ತು ಸುಂದರವಾದ ದಿನ’ ಎಂದಿದ್ದಾಳೆ.

‘ಈ ಸಮಾರಂಭವು ಅಧಿಕೃತ ವಿವಾಹವಾಗಿರಲಿಲ್ಲ, ಆದರೆ ನನ್ನ ಮದುವೆಯ ದಿನವಾಗಿತ್ತು. ನನ್ನ ಪಕ್ಕದಲ್ಲಿ ನನ್ನ ಸಂಗಾತಿ ಇರಲಿಲ್ಲ ನಿಜ. ಆದರೆ ನಾನ್ಯಾಕೆ ಮದುವೆಯ ಅವಕಾಶವನ್ನು ತಪ್ಪಿಸಿಕೊಳ್ಳಬೇಕು? ಅದಕ್ಕಾಗಿಯೆಂದೇ ಹಣವನ್ನು ಕೂಡಿಟ್ಟಿದ್ದೆ. ಯಾವುದಕ್ಕೆ ಕೂಡಿಟ್ಟಿದ್ದೆನೋ ಅದಕ್ಕಾಗಿ ಆ ಹಣ ವಿನಿಯೋಗಿಸಿದೆ’ ಎಂದಿದ್ದಾಳೆ​.

ಸೆಪ್ಟೆಂಬರ್ 30 ರಂದು ನಡೆದ ಸಮಾರಂಭದಲ್ಲಿ ಸಾರಾ​ಳ 40 ಆತ್ಮೀಯ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು. ಪ್ರತಿಯೊಬ್ಬರೂ ಇಡೀ ದಿನ ನಗುನಗುತ್ತಲೇ ಇದ್ದರು. ಇದು ತುಂಬಾ ವಿಶೇಷವಾದ ದಿನ ಎಂದು ಅವರೆಲ್ಲ ಹಾರೈಸಿದರು ಎಂದು ಆಕೆಯೇ ಹೇಳಿಕೊಂಡಿದ್ದಾಳೆ.

See also  ಯೂತ್ ಕಾಂಗ್ರೆಸ್ ಮುಖಂಡ ನಲಪಾಡ್ ಕಡೆಯವರು ಎಂದು ಹೇಳಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ಕಿರುಕುಳ..! 9 ಮಂದಿ ವಿರುದ್ಧ ಎಫ್​.ಐ.ಆರ್..! ಯುವಕ ನೀಡಿದ ದೂರಿನಲ್ಲೇನಿದೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget